ರಾಜ್ಯ ಮಟ್ಟದ ಕ್ರೀಡಾಕೂಟ ಪೂರ್ವ ತಯಾರಿ ಸಭೆ

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ದಿನಾಂಕ 06-09-2021 ಮತ್ತು 07-09-2021 ರಂದು ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ “ಹಿರಿಯರ ಮತ್ತು 23 ವರ್ಷ ವಯೋಮಿತಿಯ ಮಹಿಳೆಯರ ಹಾಗೂ ಪುರುಷರ ಕ್ರೀಡಾಕೂಟದ ಪೂರ್ವ ತಯಾರಿ ಬಗ್ಗೆ ಇಂದು ದಿನಾಂಕ 04-09-2021 ರಂದು ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ಸಂಸ್ಥೆ ಅಧ್ಯಕ್ಷರಾದ ಡಾll ಕೆಂಪರಾಜು, ಗೌರವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಮಹೇಶ್ ಠಾಕೂರ್, ಯೋಜನಾ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೋಷನ್ ಕುಮಾರ್ ಶೆಟ್ಟಿ, ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ, ಕೋಶಾಧಿಕಾರಿಗಳಾದ ದೀಪಕ್ ರಾಮ್ ಬಾಯಾರಿ, ತಾಂತ್ರಿಕ ಸಮಿತಿ ಮುಖ್ಯಸ್ಥರಾದ ರಾಮಚಂದ್ರ ಪಾಟ್ಕರ್ ಹಾಗೂ ಸಂಸ್ಥೆ ಪದಾಧಿಕಾರಿಗಳು ಮತ್ತು ಸಂಘಟನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.