
ಉಡುಪಿ ಸೆಪ್ಟೆಂಬರ್ 05: ಮಣೂರು ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ಬಾಳೆಬೆಟ್ಟು ಸಮೀಪ ಹೈಡ್ರೋ ಕ್ಲೋರಿಕ್ ಆಸಿಡ್ ಅನ್ನು ಕೊಂಡೊಯ್ಯುತ್ತಿದ್ದಂತಹ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು, ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.
ಕಾರವಾರದಿಂದ ಕೊಚ್ಚಿಗೆ 23 ಟನ್ ಹೈಡ್ರೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡುತ್ತಿದ್ದ ಈ ಟ್ಯಾಂಕರ್ ಕೋಟ ಮಣೂರು ಬಾಳೆಬೆಟ್ಟು ಸಮೀಪ ಇಂದು ಮುಂಜಾನೆ 4:30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಸುಮಾರು 30 ಮೀಟರ್ ದೂರಕ್ಕೆ ಚಲಿಸಿ ಉರುಳಿಬಿದ್ದಿದೆ. ಇದರಿಂದ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.
ಈ ಬಗ್ಗೆ ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.