
ಉಡುಪಿಯಲ್ಲಿ ದಿನಾಂಕ 06-09-2021 ಮತ್ತು 07-09-2021 ರಂದು ನೇಶನ್ ಫಸ್ಟ್ ತಂಡ “ಫಿಟ್ ರಹೋ ಉಡುಪಿ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ 75 ಕೀ.ಮೀ ಮ್ಯಾರಥಾನ್ ಓಟ ಮಾಹೆ(MAHE), ಮಣಿಪಾಲ ತಲುಪಿದ್ದು, ಮಾಹೆ ಕುಲಪತಿಗಳಾದ ಎಂ.ಡಿ. ವೆಂಕಟೇಶ್ ಹಾಗೂ ಸಹ ಕುಲಾಧಿಪತಿಗಳಾದ ಎಚ್. ಎಸ್. ಬಲ್ಲಾಲ್ ಅವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನೇಶನ್ ಫಸ್ಟ್ ತಂಡದ ಮೇಜರ್ ಪ್ರಕಾಶ್ ರಾವ್ ಹಾಗೂ ಸೂರಜ್ ಕಿದಿಯೂರು ಮತ್ತು ಪ್ರಮುಖರು ಉಪಸ್ಥಿತರಿದ್ದರು.