
ಮಿತ್ರಕೂಟ ಕಲಾ ಸಾಂಸ್ಕೃತಿಕ ವೇದಿಕೆ ಭಟ್ಕಳ (ಉತ್ತರಕನ್ನಡ) ಇವರು ಆಯೋಜಿಸಿದ ರಾಷ್ಟ್ರಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ 2021 ಕಿರಿಯರ ವಿಭಾಗದಲ್ಲಿ ಕುಮಾರಿ ನಿಹಾರಿಕಾ ದೇವಾಡಿಗ ತೃತೀಯ ಸ್ಥಾನ ಪಡೆದಿರುತ್ತಾಳೆ.ಇವಳು ಕೋಟೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಲೀಡಿಂಗ್ ಪೈರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಜೂರಿನ ರವೀಂದ್ರ ದೇವಾಡಿಗ ಹಾಗೂ ಶಿಕ್ಷಕಿಯಾದ ರವಿಕಲಾ ದೇವಾಡಿಗ ದಂಪತಿಯ ಪುತ್ರಿ