ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ- ಕೊನೆ ದಿನ- 29-09-2021

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಮೀಸಲಾತಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ರಾಜ್ಯದಲ್ಲಿ ಒಟ್ಟು 20 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಮತ್ತು 80 ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಆಗಸ್ಟ್ 31ರಿಂದ ಸೆಪ್ಟಂಬರ್ 29ರವರೆಗೆ ಅರ್ಹ ಅಭ್ಯರ್ಥಿಗಳು ಈ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ:
ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ – ಪಿಎಸ್‌ಐ
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ
ವಯೋಮಿತಿ: ಕನಿಷ್ಟ 21 ಗರಿಷ್ಟ 30
(ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ)
ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್
ಪಿಯುಸಿ ಅಥವಾ 10+2 ಅಥವಾ ತತ್ಸಮಾನ
ವಯೋಮಿತಿ: ಕನಿಷ್ಟ 19 ಗರಿಷ್ಟ 25
(ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ)
ನಿಗದಿತ ಶುಲ್ಕವನ್ನು ನಗದು ಯಾ ಆನ್‌ಲೈನ್ ರೂಪದಲ್ಲಿ (ಸ್ಥಳೀಯ ಅಂಚೆ ಕಚೇರಿ ಅಥವಾ HDFC ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ಚಲನ್‌ನ ಅಭ್ಯರ್ಥಿ ಪ್ರತಿ ಇಟ್ಟುಕೊಳ್ಳಬೇಕು. ಡಿಡಿ ಪೋಸ್ಟಲ್ ಆರ್ಡರ್, ಮನಿ ಆರ್ಡರ್‌ಗಳನ್ನು ಸ್ವೀಕರಿಸುವುದಿಲ್ಲ.
ಅರ್ಜಿ ಹಾಕುವ ಮುನ್ನ ಯಾವುದೇ ತಪ್ಪು ಮಾಹಿತಿ ನೀಡದೆ ಆನ್‌ಲೈನ್‌ನಲ್ಲಿ ಇರುವ ಅರ್ಜಿಯನ್ನು ಭರ್ತಿ ಮಾಡಬೇಕು.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್‌ಗೆ ಕ್ಲಿಕ್ ಮಾಡಬಹುದು;
http://kspsports21.ksponline.co.in/