ನ್ಯೂ ಇಂಡಿಯಾ ಅಶ್ಶೂರೆನ್ಸ್‌ನಲ್ಲಿ ಕಂಪನಿ ಲಿಮಿಟೆಡ್ ಉದ್ಯೋಗವಕಾಶ ಆರಂಭ

ಭಾರತ ಸರ್ಕಾರದ ಮಾಲಕತ್ವ ಹೊಂದಿರುವ ಪ್ರತಿಷ್ಠಿತ ಸಾರ್ವಜನಿಕ ವಲಯದ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ ಆರಂಭವಾಗಿದೆ.
ಕಂಪೆನಿಯಲ್ಲಿ 300 ಆಡಳೀತಾತ್ಮಕ ಅಧಿಕಾರಿಗಳ ಹುದ್ದೆಗೆ ನೇಮಕಾತಿ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಈಗಲೇ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು: ಅಡ್ಮಿನಿಸ್ಟ್ರೇಟಿವ್ ಆಫೀಸರ್
ಹುದ್ದೆಗಳ ಸಂಖ್ಯೆ : 300
ವಿದ್ಯಾರ್ಹತೆ- ಯಾವುದೇ ವಿವಿಯಲ್ಲಿ ಪದವಿ ಯಾ ಸ್ನಾತಕೋತ್ತರ ಪದವಿ
ವೇತನ – ಮಾಸಿಕ ರೂ. 62000/-
ವಯೋಮಿತಿ- ಕನಿಷ್ಟ 21 ರಿಂದ ಗರಿಷ್ಠ 30 ವರ್ಷ ವಯಸ್ಸು.
ವಯೋಮಿತಿ ಸಡಿಲಿಕೆ- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇದೆ. ಅದೇ ರೀತಿ ಇತರ ಹಿಂದುಳೀದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ಹೇಗೆ ಗೊತ್ತೇ..?: ‘ಲಿಖಿತ’ ಪರೀಕ್ಷೆ ಹಾಗೂ ‘ಮೌಖಿಕ’ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರಗಳು: ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ
ಅರ್ಜಿ ಸಲ್ಲಿಸಲು ಸೆಪ್ಟಂಬರ್ 21, 2021ಕ್ಕೆ ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬೇಕು..
https://www.newindia.co.in/portal/readMore/Recruitment