ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ,ಹಣದೊಂದಿಗೆ ಪರಾರಿ..!

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ಚಿನ್ನಾಭರಣ ಹಾಗೂ ಹಣವನ್ನು ಹೊತ್ತುಕೊಂಡು ಪರಾರಿಯಾದ ಪ್ರಕರಣ ಬರ್ಕೆ ಠಾಣೆಯಲ್ಲಿ ದಾಖಲಾಗಿದೆ. ಪರಾರಿಯಾದ ಯುವತಿಯನ್ನು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್ಮೆಂಟ್‌ವೊoದರಲ್ಲಿ ವಾಚ್‌ಮನ್ ಆಗಿರುವ ಯಶೋಧಾ ಅವರ ಪುತ್ರಿ ರೇಶ್ಮಾ (21) ಎನ್ನಲಾಗಿದೆ.
ಮೂಲತಃ ಗದಗದ ನಿವಾಸಿಗಳಾಗಿದ್ದು, ಯುವತಿಯ ನಿಶ್ಚಿತಾರ್ಥ ಆ. 21ರಂದು ನಡೆದಿತ್ತು.
ನಿಶ್ಚಿತಾರ್ಥ ಸಂದರ್ಭ ಹುಡುಗನ ಮನೆಯವರು ಅಂದಾಜು ಒಂದು ಲ.ರೂ. ಮೌಲ್ಯದ ಚಿನ್ನದ ಸರ, 50,000 ರೂ. ಮೌಲ್ಯದ ಚಿನ್ನದ ಉಂಗುರ, ಕಿವಿಯೋಲೆ, ಬೆಳ್ಳಿ ಕಾಲುಗೆಜ್ಜೆ ಹಾಕಿದ್ದರು.
ರೇಶ್ಮಾ ಆ. 26ರಂದು ಈ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ. ಅಲ್ಲದೆ ಮನೆಯವರು ಬ್ಯಾಂಕ್‌ನಲ್ಲಿ ಜಮೆ ಮಾಡಿಟ್ಟಿದ್ದ 90,000 ರೂ. ಹಣವನ್ನು ಅಕ್ಬರ್ ಆಲಿ ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ ಎಂದು ಈಕೆಯ ತಾಯಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.