ಕರಾವಳಿ

ಕೇಂದ್ರ ಬಜೆಟ್ 2022 ರ ಪಕ್ಷಿ ನೋಟ

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೇವಲ ಇವತ್ತು ನಾಳೆಯ ಯೋಚನೆ ಮಾಡದೆ ಮುಂದಿನ 25 ವರ್ಷಗಳ ವರೆಗೆ ಜನ ಪರ ಹಾಗು ಜನ ಹಿತವನ್ನು ಪರಿಗಣಿಸಿ ಅನೇಕ ಯೋಜನೆಗಳನ್ನು ಫೆಬ್ರವರಿ 1, 2022 ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ರವರು ಮಂಡಿಸಿದ್ದಾರೆ. ಈ ಕೇಂದ್ರ ಬಜೆಟ್ ಮಂಡನೆಯು ಅನೇಕ ಊಹಾಪೋಹಗಳನ್ನು, ನಿರೀಕ್ಷೆಗಳನ್ನು ಹುಟ್ಟುಹಾಕಿಸಿದ್ದಂತೂ ನಿಜವೇ ಸರಿ. ಕೋವಿಡ್ ಸಂದರ್ಭದಲ್ಲಿಯೂ ರೂ 39.5 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಯಾಗಿರುವುದು ಶ್ಲಾಘನೀಯ.

ಮುಖ್ಯವಾಗಿ ನಾಲ್ಕು ವಿಚಾರಗಳನ್ನು ಇದರಲ್ಲಿ ಕಾಣಬಹುದು 1. PM ಗತಿ ಶಕ್ತಿ 2. ಅಂತರ್ಗತ ಅಭಿವೃದ್ಧಿ 3.. ಉತ್ಪಾದಕತೆ ವರ್ಧನೆ ಮತ್ತು ಹೂಡಿಕೆ, ಹೊಸ ಅವಕಾಶಗಳು, ಶಕ್ತಿ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ ಹಾಗೂ 4. ಹಣಕಾಸು ಹೂಡಿಕೆ.

PM ಗತಿ ಶಕ್ತಿ ಮೂಲಕ ಅನೇಕ ಮೂಲ ಸೌಕರ್ಯಗಳಿಗಾಗಿ ಬಜೆಟಿನ ಪ್ರಮುಖ ವೆಚ್ಚವನ್ನು ವಿನಿಯೋಗಿಸಲಾಗಿದೆ.

ಕೃಷಿಗೆ ಒತ್ತು ನೀಡಿ ರೈತರಿಗೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಹಾಗು ಕೃಷಿ ಉತ್ಪನ್ನ, ಕೃಷಿ ಮತ್ತು ಗ್ರಾಮೀಣ ಉದ್ಯಮಗಳಿಗೆ ನಬಾರ್ಡ್ ಮೂಲಕ ಬಂಡವಾಳ ಸಂಗ್ರಹ, ನೈಸರ್ಗಿಕ, ಸಾವಯವ ಕೃಷಿ, ಆಧುನಿಕ ಕೃಷಿ ಅಗತ್ಯಗಳನ್ನು ಪೂರೈಸಲು ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಪರಿಷ್ಕರಣೆ, 2022-23ರಲ್ಲಿ ಹರ್ ಘರ್, ನಲ್ ಸೇ ಜಲ್: 3.8 ಕೋಟಿ ಕುಟುಂಬಗಳಿಗೆ 60000 ಕೋಟಿ ವಿನಿಯೋಗ,1.50 ಲಕ್ಷ ಪೋಸ್ಟ್ ಆಫೀಸ್ ಗಳಲ್ಲಿ ಬ್ಯಾಂಕಿಂಗ್ ಸೇವೆ , ಹಸಿರು ಮೂಲಸೌಕರ್ಯಕ್ಕಾಗಿ ಹಸಿರು ಬಾಂಡ್ಗಳು ಪರಿಚಯಿಸಲಾಗಿದೆ.

ಇನ್ನು ತೆರಿಗೆ ವಿಚಾರವನ್ನು ಪರಿಗಣಿಸುವುದಾದರೆ ಸಮಾನ್ಯ ಜನರಿಗೆ ಅಷ್ಟೇನು ಸಿಹಿ ಸುದ್ದಿ ಇಲ್ಲವಾದರೂ ಕೆಲವು ಗಮನಾರ್ಹ ಬದಲಾವಣೆಗಳನ್ನು ಮಂಡಿಸಲಾಗಿದೆ. ಆದಾಯ ತೆರಿಗೆ ಪಾವತಿಯಲ್ಲಾದ ದೋಷವನ್ನು ಸರಿಪಡಿಸಲು 2 ವರ್ಷಗಳ ಅವಕಾಶ, ಸಹಕಾರ ಸಂಘಗಳ ತೆರಿಗೆ ಮೇಲಿನ ಸರ್ಚಾರ್ಜ್ ಶೇ.12ರಿಂದ ಶೇ.7ಕ್ಕೆ ಇಳಿಕೆ. ಯಾವುದೇ ವರ್ಚುವಲ್ ಡಿಜಿಟಲ್ (ಉದಾ: ಕ್ರಿಪ್ಟೋ ಕರೆನ್ಸಿ) ಆಸ್ತಿಯ ವರ್ಗಾವಣೆಯಿಂದ ಬರುವ ಆದಾಯಕ್ಕೆ 30% ದರದಲ್ಲಿ ತೆರಿಗೆ, ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ವಿಸ್ತರಣೆ, ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ಶೇ.1ರಷ್ಟು ಟಿಡಿಎಸ್ ಪ್ರಸ್ತಾವ, ರಾಜ್ಯ ಸರ್ಕಾರಿ ನೌಕರರಿಗೆ NPS ಮೇಲಿನ ತೆರಿಗೆ ಕಡಿತ 14% ವರೆಗೆ, ವರ್ಚುವಲ್ ಡಿಜಿಟಲ್ ಅಸೆಟ್ ಕೊಡುಗೆ ಪಡೆಯುವವರಿಗೆ ತೆರಿಗೆ. ಷೇರು ಮತ್ತು ಇತರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಮೇಲಿನ ಸರ್ಚಾರ್ಜ್ ಶೇ 37ರಿಂದ ಶೇ 15ಕ್ಕೆ ಇಳಿಕೆ ಇತ್ಯಾದಿಗಳನ್ನೂ ಮಂಡಿಸಲಾಗಿದೆ. ಮುಖ್ಯವಾಗಿ ತೆರಿಗೆ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

MSME ವಲಯಕ್ಕೆ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು ಮಾರ್ಚ್ 2023 ರವರೆಗೆ ವಿಸ್ತರಣೆ – MSME ವಲಯಕ್ಕೆ ಬೇರೆ ಯಾವುದೇ ಸವಲತ್ತುಗಳನ್ನು ನೀಡಲಾಗಿಲ್ಲ. ಉದ್ಯಮ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ಕೊಡಬಹುದಿತ್ತು ಎಂಬುದು ನನ್ನ ಅಭಿಪ್ರಾಯ . ಅನೇಕರಿಗೆ ಕೊಡುಗೆಗಳ ಮಾಹಾಪೂರದ ಆಸೆಯಿದ್ದರೂ, ಆಸೆಗಳು ನಿರಾಸೆಯಾಗಿವೆ. ಈ ಬಜೆಟ್ ದೂರಗಾಮಿ ಪರಿಣಾಮ ಬೀರಿದರೂ, ಸದ್ಯಕ್ಕೆ ಅನೇಕರ ನಿರೀಕ್ಷೆ ಪೂರೈಸಿಲ್ಲ. ಬಡ ಹಾಗು ಮಾಧ್ಯಮ ವರ್ಗಕ್ಕೆ ನೇರವಾಗಿ ತಲುಪುವ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ.ಫೆಬ್ರವರಿ 6 ಕ್ಕೆ ಶಕ್ತಿಕಾಂತ್ ದಾಸ್ ರವರು ಮಂಡನೆ ಮಾಡಲಿರುವ ಮೊನಿಟರಿ ಪಾಲಿಸಿಯು ಈ ಬಜೆಟ್ನಲ್ಲಿ ಕಂಡ ಕುಂದು ಕೊರತೆಗಳನ್ನು ಸರಿದೂಗಿಸಿ ದೇಶದ ಆರ್ಥಿಕತೆಗೆ ಶಕ್ತಿ – ಬೂಸ್ಟ್ ನೀಡಬಹುದು ಎಂದು ಅಪೇಕ್ಷಿಸೋಣ.

ಬಜೆಟ್ ಎಂಬುದು ಸಂವಿಧಾನದತ್ತ

ಫೆಬ್ರವರಿ ೧ ಇರಲಿ ನಮ್ಮೆಲ್ಲರ ಒಲವು ಬಜೆಟ್ ನತ್ತ

ಎಲ್ಲರ ದೃಷ್ಟಿ ನಿರ್ಮಲರ ಘೋಷಣೆಯತ್ತ

ನೋಡುತ್ತಿರಿ ಅತ್ತ ಇತ್ತ

ಅಭಿವೃದ್ಧಿ ಆಗಲಿದೆ ಸುತ್ತ ಮುತ್ತ

ಹಿಡಿಯದಿಲ್ಲ ಹೊಸ ತೆರಿಗೆ ಎಂಬ ಬೆತ್ತ

ಮಾಡುವರು ಆದಾಯ ಖರ್ಚುಗಳ ಚುಕ್ತಾ

ವ್ಯಾಕ್ಸೀನ್ ನಿಂದ ಆಗುವೆವು ನಾವು ಕೋವಿಡ್ ಮುಕ್ತ

ಶೀಘ್ರವೇ ದಾಪುಗಾಲಿಡೋಣ 5 ಟ್ರಿಲಿಯನ್ ಡಾಲರ್ ಎಕಾನಮಿ ಯತ್ತ

ಸಿ ಎ ಎಸ್ ಎಸ್ ನಾಯಕ್

ನಿಕಟಪೂರ್ವ ಅಧ್ಯಕ್ಶರು,

ಐ ಸಿ ಎ ಐ, ಮಂಗಳೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!