ಕರಾವಳಿ
ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ

ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ (93) ಗುರುವಾರ ಕಾಸರಗೋಡಿನ ಮಾನ್ಯದಲ್ಲಿ ನಿಧನರಾದರು.
ಪುಂಡು ವೇಷ ಮತ್ತು ಸ್ತ್ರೀವೇಷದಲ್ಲಿ ಪ್ರಸಿದ್ಧರಾಗಿದ್ದ ತಿಮ್ಮಯ್ಯ ಅವರು ಚೊಕ್ಕಾಡಿ, ಧರ್ಮಸ್ಥಳ, ಮಧೂರು, ಕದ್ರಿ, ಮುಲ್ಕಿ, ಉದ್ಯಾವರ ಸೇರಿದಂತೆ ಹತ್ತಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.
ತಿಮ್ಮಯ್ಯ ಇವರನ್ನು ಯಕ್ಷಗಾನ ಕಲಾರಂಗ ಸಂಸ್ಥೆ ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಗೌರವಿಸಿತ್ತು.
ಮೃತರು ಬಂಧುಗಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.