ಕರಾವಳಿ
ಮಲ್ಲಿಕಾ ಟೀಚರ್ ಅಭಿನಂದನಾ ಸಮಿತಿ, ಕೊಡವೂರು ವತಿಯಿಂದ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭ

ಮಲ್ಲಿಕಾ ಟೀಚರ್ ಅಭಿನಂದನಾ ಸಮಿತಿ, ಕೊಡವೂರು ವತಿಯಿಂದ ಕೊಡವೂರು ಸರ್ಕಲ್ ಬಳಿ ಇಂದು ದಿನಾಂಕ 12-09-2021 ರಂದು ಹಮ್ಮಿಕೊಳ್ಳಲಾದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸದಸ್ಯರಾದ ವಿಜಯ್ ಕೊಡವೂರು, ಶ್ರೀಷ ಕೊಡವೂರು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮತ್ಸ್ಯೋದ್ಯಮಿಗಳಾದ ಸಾಧು ಸಾಲ್ಯಾನ್, ಆನಂದ್ ಸುವರ್ಣ, ಮಲ್ಲಿಕಾ ಟೀಚರ್ ಹಾಗೂ ಮಲ್ಲಿಕಾ ಟೀಚರ್ ಅಭಿನಂದನಾ ಸಮಿತಿಯ ಪದಾಧಿಕಾರಿಗಳು ಮತ್ತು ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.