ರಾಷ್ಟ್ರೀಯ
ಕಾಸರಗೋಡು : 2.5 ಕೋಟಿ ರೂ. ಮೌಲ್ಯದ ಶ್ರೀಗಂಧ ವಶ

ಕಾಸರಗೋಡು : ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಸುಮಾರು ಒಂದು ಕ್ವಿoಟಾಲ್ ಶ್ರೀಗಂಧದ ತುಂಡುಗಳನ್ನು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ನೇತೃತ್ವದ ತಂಡ ವಶಪಡಿಸಿ ಕೊಂಡಿರುವ ಘಟನೆ ಕಾಸರಗೋಡು ನಗರ ಹೊರವಲಯದಲ್ಲಿ ಇಂದು ಮುಂಜಾನೆ ನಡೆದಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಅಧಿಕೃತ ನಿವಾಸದ ಸಮೀಪದಿಂದ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಶ್ರೀಗಂಧದ ಮೌಲ್ಯ ಸುಮಾರು 2.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮನೆ ಮಾಲಕ ಹಾಗೂ ಆರೋಪಿಗಳು ದಾಳಿ ಸಂದರ್ಭ ಪರಾರಿಯಾಗಿದ್ದಾರೆ. ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾ೦ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.