ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರ ನಿಷೇಧ

ಅಫ್ಘಾನಿಸ್ತಾನ: ಐಪಿಎಲ್ ನಡೆಯುವ ಸ್ಟೇಡಿಯಂಗಳಲ್ಲಿ ಮಹಿಳಾ ಪ್ರೇಕ್ಷಕರು ಇರುವ ಕಾರಣ ಐಪಿಎಲ್ 2021ರ ಪ್ರಸಾರವನ್ನು ಅಫ್ಘಾನಿಸ್ತಾನದಲ್ಲಿ ನಿಷೇಧಿಸಲಾಗಿದೆ.
ಹೌದು.. ಈ ಹಿಂದೆ ಮಹಿಳಾ ಕ್ರಿಕೆಟ್ ಅನ್ನು ನಿಷೇಧಿಸಿ ಸುದ್ದಿಯಲ್ಲಿದ್ದ ತಾಲಿಬಾನಿಗಳು ಈ ಬಾರಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರ ಮಾಡಕೂಡದು ಎಂದು ಆದೇಶ ಹೊರಡಿಸಿದ್ದಾರೆ. ಐಪಿಎಲ್ ಇಸ್ಲಾಂ ವಿರೋಧಿಯಾಗಿದ್ದು, ಐಪಿಎಲ್ ಟೂರ್ನಿ ವೇಳೆ ತುಂಡುಡುಗೆಯಲ್ಲಿ ಮಹಿಳೆಯರು ನೃತ್ಯ ಮಾಡುತ್ತಾರೆ. ಅಲ್ಲದೆ ಐಪಿಎಲ್ ವೇಳೆ ಕ್ರೀಡಾಂಗಣದಲ್ಲಿ ತುಂಡುಡುಗೆಯಲ್ಲಿ ಮತ್ತು ಇಸ್ಲಾಂ ಕಾನೂನಿಗೆ ವಿರುದ್ಧವಾಗಿ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ಇದು ಇಸ್ಲಾಂಗೆ ವಿರುದ್ದವಾಗಿದ್ದು, ಹಾಗಾಗಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ, ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಆಟಗಾರರಾದ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದು, ಇವರ ಆಟವನ್ನು ವೀಕ್ಷಿಸಲು ಈಗ ಅಫ್ಘಾನಿಸ್ತಾನ್ ಕ್ರಿಕೆಟ್ ಪ್ರೇಮಿಗಳಿಗೆ ಭಾಗ್ಯವಿಲ್ಲದಂತಾಗಿದೆ.