ಕರಾವಳಿ
ಉಡುಪಿ ಜಿಲ್ಲೆಯಲ್ಲಿ 29.09.2021ರಂದು ಕೋವಿಡ್-19 ಲಸಿಕಾ ಮಹಾಮೇಳ

ಉಡುಪಿ: ದಿನಾಂಕ 29/09/2021 ರಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮಹಾಮೇಳ ಜರುಗಲಿದೆ. ಜಿಲ್ಲೆಯಲ್ಲಿ 50,000 ಡೋಸ್ ಲಸಿಕೆ ಲಭ್ಯವಿದ್ದು 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಲಸಿಕೆ ಮತ್ತು 2ನೇ ಡೋಸ್ ಲಸಿಕೆ (ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಪ್ರಥಮ ಡೋಸ್ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ) ನೀಡಲಾಗುವುದು.
ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 8.00 ರಿಂದ ಸಂಜೆ 5.00 ಗಂಟೆಯವರೆಗೆ ಲಸಿಕಾಕರಣ ಜರುಗಲಿದೆ. ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ಇರುವುದಿಲ್ಲ, ಸ್ವಾಬ್ ಟೆಸ್ಟ್ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9663957222 ಯನ್ನು ಸಂಪರ್ಕಿಸಬಹುದು. ಡೋಸ್ಗಳು ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.