ಉಡುಪಿ: ಖ್ಯಾತ ಸಾರಿಗೆ ಉದ್ಯಮಿ ಗಜಾನನ, ಹನುಮಾನ್ ಟ್ರಾನ್ಸ್ ಪೋರ್ಟ್ ಪಾಂಗಾಳ ಪಿ. ರಬೀಂದ್ರ ನಾಯಕ್ ಇನ್ನಿಲ್ಲ

ಉಡುಪಿ: ಸಮಾಜ ಸೇವಕ ಹಾಗೂ ಸಾರಿಗೆ ಉದ್ಯಮಿ 99 ವರ್ಷದ ಪಿ. ರಬೀಂದ್ರ ನಾಯಕ್ ಅವರು ಸುದೀರ್ಘ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನ ಹೊಂದಿದರು.
1951ರಲ್ಲಿ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪನಿಗೆ ಸೇರಿದ ಅವರು, 1972ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು. ದಶಕಗಳ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಿ, ಸಾರಿಗೆ ಕ್ಷೇತ್ರದಲ್ಲಿ ಯಶಸ್ವಿ ಸಂಸ್ಥೆಯನ್ನಾಗಿ ರೂಪಿಸಿದರು. ಕೆಲಕಾಲ ಅವರು ಶ್ರೀಗಜಾನನ ಮೋಟಾರ್ ಟ್ರಾನ್ಸ್‌ಪೋರ್ಟ್ ಕಂ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಪಟ್ಲ ಶಾಲೆ ಅಧ್ಯಕ್ಷರಾಗಿ, ಕಟಪಾಡಿಯ ಎಸ್‍ವಿಎಸ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮಾತ್ರವಲ್ಲದೆ, ಜಿಲ್ಲಾಸ್ಪತ್ರೆಗೆ ಲಕ್ಷಾಂತರ ರೂ ದೇಣಿಗೆ ನೀಡಿರುತ್ತಾರೆ. ಉಡುಪಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು ಅಮೇರಿಕಾದಲ್ಲಿ ನೆಲೆಸಿದ್ದಾರೆ.