ಹೈದರಾಬಾದ್ ವಿರುದ್ಧ ಕೋಲ್ಕತ್ತಾಗೆ ಜಯ

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ನೆರವಿನಿಂದಾಗಿ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ.
ಹೈದರಾಬಾದ್ ತಂಡ ನೀಡಿದ್ದ 116 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಕೋಲ್ಕತ್ತಾ 19.4 ಓವರ್‌ಗಳಲ್ಲಿ ಗುರಿ ಮುಟ್ಟಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 8ರನ್(14 ಎಸೆತ) ಮತ್ತು ರಾಹುಲ್ ತ್ರಿಪಾಠಿ 7ರನ್(6 ಎಸೆತ, 1 ಬೌಂಡರಿ) ಸಿಡಿಸಿ ಔಟಾದರು. ಬಳಿಕ ಶುಭಮನ್ ಗಿಲ್ ಮತ್ತು ನಿತೇಶ್ ರಾಣಾ 55ರನ್(59 ಎಸೆತ)ಗಳ ಜೊತೆಯಾಟವಾಡಿ ಗೆಲುವಿನಂಚಿಗೆ ತಂದು ನಿಲ್ಲಿಸಿದರು. ಶುಭಮನ್ ಗಿಲ್ 57ರನ್(51 ಎಸೆತ, 10 ಬೌಂಡರಿ) ಗಳಿಸಿ ಕ್ಯಾಚ್ ನೀಡಿದರು. ರಾಣಾ ಕೂಡ 25ರನ್(33 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ದಿನೇಶ್ ಕಾರ್ತಿಕ್ ಅಜೇಯ 18ರನ್(12 ಎಸೆತ 3 ಬೌಂಡರಿ) ಮತ್ತು ಇಯಾನ್ ಮಾರ್ಗನ್ 2ರನ್ ಗಳಿಸಿದರು.