ಕರಾವಳಿತಾಜಾ ಸುದ್ದಿಗಳು

ನಿಟ್ಟೆ KBL ವತಿಯಿಂದ ಪ್ರತಿಷ್ಠಿತ ‘ಕೌನ್ ಬನೇಗಾ ಉದ್ಯಮಪತಿ’ ಸ್ಪರ್ಧೆ

ಭಾರತ ಸರ್ಕಾರದ ಅಟಲ್ ಇನ್ನೋವೇಶನ್ ಮಿಷನ್ ಅಡಿಯಲ್ಲಿಅಟಲ್ ಇನ್ಕ್ಯುಬೇಶನ್ ಸೆಂಟರ್ ಸ್ಥಾಪಿಸಲು ನೀತಿ ಆಯೋಗದಿಂದ ಆಯ್ಕೆ ಮಾಡಲಾದ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ನಿಟ್ಟೆಯ ಎಜುಕೇಶನ್ ಟ್ರಸ್ಟ್ ಒಂದಾಗಿದೆ.

ಕೃಷಿ, ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಹೊಸ ಛಾಪನ್ನು , ನವೀನ ಕಲ್ಪನೆಗಳನ್ನು ಪೋಷಿಸಲು ಉದ್ಯಮಗಳನ್ನು ಆರಂಭಿಸಲು ಬಯಸುವ ಉದಯೋನ್ಮುಖ ಉದ್ಯಮಿಗಳಿಗೆ ಉತ್ತೇಜನ ನೀಡುವ ಮೂಲಕ ಮತ್ತು ದೇಶದ ಉದ್ಯಮಶೀಲತೆಯ ದೃಷ್ಟಿಕೋನವನ್ನು ವೇಗಗೊಳಿಸುವುದು ಎಐಸಿ ನಿಟ್ಟೆಯ ಮುಖ್ಯ ಗುರಿಯಾಗಿದೆ. ಕೇವಲ ಒಂದೇ ವರ್ಷದ ಅಲ್ಪಾವಧಿಯಲ್ಲಿ ಎಐಸಿ ನಿಟ್ಟೆಯು 35 ಸ್ಟಾರ್ಟಪ್‌ಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿದೆ.

ಎಐಸಿ-ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳ ಯುವ ಉದ್ಯಮಿಗಳಿಗೆ ನವೋದ್ಯಮ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ‘ಕೌನ್ ಬನೇಗಾ ಉದ್ಯಮಪತಿ’ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯು ನಮ್ಮ ದೇಶದ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ನ ಸಹಯೋಗದಲ್ಲಿ ನಡೆಯಲಿದೆ.

ನಿಟ್ಟೆ – ಕೆಬಿಎಲ್ ಕೌನ್ ಬನೇಗಾ ಉದ್ಯಮಪತಿ (ಕೆಬಿಯು) ಸ್ಪರ್ಧೆಯಿಂದ ಎಲ್ಲಾ ವಯಸ್ಸಿನ ಜನರ ವಿಚಾರಗಳು ಮತ್ತು ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರ ನಡುವೆ ಉದ್ಯಮಶೀಲತೆಯನ್ನು ಉತ್ತೇಜಿಸಿ ಭವಿಷ್ಯದ ಉದ್ದಿಮೆಗಳನ್ನು ಕೈಗೊಳ್ಳುವ ಛಲವನ್ನು ನೀಡುತ್ತದೆ. ಇದಲ್ಲದೆ ವಿದ್ಯಾರ್ಥಿಗಳಲ್ಲಿರುವ ನವೀನ ಆಲೋಚನೆಗಳನ್ನು ಹೊರತಂದು ಕಾರ್ಪೊರೇಟ್ ಮತ್ತು ಕೈಗಾರಿಕಾ ವಲಯಗಳೊಂದಿಗೆ ಸಂವಹನ ನಡೆಸಲು ವೇದಿಕೆಯನ್ನು ಒದಗಿಸುತ್ತದೆ.

ಈ ಸ್ಪರ್ಧೆಯು ಪ್ರಾದೇಶಿಕ ಮಟ್ಟದಲ್ಲಿ ಸ್ಟಾರ್ಟ್ಅಪ್‌ಗಳ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ರಾಷ್ಟ್ರೀಯ ಮಟ್ಟದಲ್ಲಿ ಈ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.ಈ ಸ್ಪರ್ಧೆಯು (1) ಬಯೋ-ಟೆಕ್ (2) ಮೆಡಿ-ಟೆಕ್ (3) ಅಗ್ರಿಟೆಕ್ (4) ಇಂಧನ ಮತ್ತು (5) ಸಾಫ್ಟ್‌ವೇರ್ ಆಸ್ ಸರ್ವಿಸ್ (ಸಾಸ್) ಈ ವ್ಯಾಪಾರದ ಕುರಿತಾದ ವಿಚಾರಗಳಿಗೆ ಮುಕ್ತವಾಗಿದೆ. ಈ ಸ್ಪರ್ಧೆಯನ್ನು AIC-ನಿಟ್ಟೆ ಇನ್ಕ್ಯೂಬೇಶನ್ ಸೆಂಟರ್ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ಇವರ ಸಹಯೋಗದಲ್ಲಿ ಆಯೋಜಿಸಿದೆ .
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ ಉದ್ಯಮಗಳು, ಸಂಶೋಧನಾ ತಂಡಗಳು ಅಥವಾ ವ್ಯಕ್ತಿಗತ ಉದ್ದಿಮೆದಾರರು (40 ವರ್ಷ ವಯೋಮಿತಿ) ವೈಯುಕ್ತಿಕವಾಗಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಎಲ್ಲಾ ನೋಂದಾಯಿತ ಸ್ಪರ್ದಿಗಳಿಗೆ ಉಚಿತ ಕಾರ್ಯಾಗಾರಗಳು, ಮಾರ್ಗದರ್ಶಕರಿಂದ ಮುಕ್ತ ಮಾರ್ಗದರ್ಶನ ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ . ಮೊದಲ ಸುತ್ತಿನಲ್ಲಿ ಶಾರ್ಟ್‌ಲಿಸ್ಟ್ ಮಾಡಿದ 100 ವಿಚಾರಗಳು/ಐಡಿಯಾಗಳಿಗೆ ಉದ್ಯಮ ತಜ್ಞರಿಂದ ಅವರ ಆಲೋಚನೆಗಳನ್ನು ಪರಿಷ್ಕರಿಸಲು ಉಚಿತ ಮಾರ್ಗದರ್ಶನವನ್ನು ನೀಡಲಾಗುತ್ತದೆ. ತದನಂತರ 100 ವಿಚಾರಗಳಲ್ಲಿ ಶಾರ್ಟ್‌ಲಿಸ್ಟ್ ಮಾಡಲಾದ 50 ವಿಚಾರಗಳು ಬೂಟ್ ಕ್ಯಾಂಪ್‌ಗಳಲ್ಲಿ ಭಾಗವಹಿಸಬಹುದು .

ಹೂಡಿಕೆದಾರರಿಂದ ಶಾರ್ಟ್‌ಲಿಸ್ಟ್ ಮಾಡಿದ ಅಗ್ರ 25 ಐಡಿಯಾಗಳಿಗೆ ಗ್ರೂಮಿಂಗ್ ಎಕ್ಸ್‌ಪರ್ಟ್‌ಗಳು, ಇಮೇಜ್ ಮತ್ತು ಬ್ರ್ಯಾಂಡಿಂಗ್ ಕನ್ಸಲ್ಟೆಂಟ್‌ಗಳು, ವ್ಯಕ್ತಿತ್ವ ವಿಕಸನ ಮತ್ತು ಪ್ರೊಫೈಲಿಂಗ್ ಕೋಚ್‌ಗಳಿಂದ ಓರಿಯಂಟೇಶನ್ ಮತ್ತು ಟ್ರೇನಿಂಗ್ ಸೆಶನ್‌ಗಳನ್ನು ನೀಡಲಾಗುತ್ತದೆ. ಈ ’10 ದಿನದ ಕಾರ್ಯಕ್ರಮ’ದಲ್ಲಿ ವಿಶ್ವ ದರ್ಜೆಯ ತಜ್ಞರಿಂದ ಒಬ್ಬರಿಗೊಬ್ಬರು ಮಾರ್ಗದರ್ಶನ ಪಡೆಯುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ .
ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯು ಐದು ಟಿವಿ ಸಂಚಿಕೆಗಳನ್ನು ಒಳಗೊಂಡಿದೆ ಮತ್ತು ಪ್ರತಿ ಸಂಚಿಕೆಯಲ್ಲಿ ಒಬ್ಬ ವಿಜೇತರನ್ನು ಘೋಷಿಸಲಾಗುತ್ತದೆ. ಕೆಬಿಯು ವಿಜೇತರು ನಗದು ಬಹುಮಾನ ಹಾಗು ರೂ 25 ಲಕ್ಷಗಳವರೆಗೆ ಸೀಡ್ ಕ್ಯಾಪಿಟಲ್ ಹಾಗೂ ಒಂದು ವರ್ಷದ ಅವಧಿಗೆ ಉಚಿತ ಇನ್ಕ್ಯುಬೇಷನ್ ಪಡೆಯಲಿದ್ದಾರೆ.
ಮಾರ್ಗದರ್ಶನ ಬೆಂಬಲ:25 ಅಂತಿಮ ಸ್ಪರ್ಧಿಗಳಿಗೆ ಕಾರ್ಯತಂತ್ರದ ಸಲಹೆ ಹಾಗೂ ಮಾರ್ಗದರ್ಶನವನ್ನು ಉದ್ಯಮದ ತಜ್ಞರು ಒದಗಿಸಲಿರುವರು.

ಗುರುತಿಸುವಿಕೆ ಮತ್ತು ಪ್ರಚಾರ: ಐದು ವಿಜೇತರು ಒಂದು ವರ್ಷದವರೆಗೆ ಈ ಸ್ಪರ್ಧೆಯ ಮೂಲಕ ಕಾರ್ಪೊರೇಟ್ / ಉದ್ಯಮ ಮತ್ತು ಪ್ರಚಾರದಿಂದ ಮೈಲೇಜ್ ಪಡೆಯುತ್ತಾರೆ.
ನೋಂದಣಿ ಕೊನೆಯ ದಿನಾಂಕ 20ನೇ ಅಕ್ಟೋಬರ್ 2021. ಸ್ಪರ್ಧೆಯ ವಿವರಗಳನ್ನು https://aicnitte.com/kbu/ ರಿಂದ ಪಡೆಯಬಹುದು
ಸಂಪರ್ಕ ವಿವರಗಳು; ಡಾ. ಎಪಿ ಆಚಾರ್ – ಸಿಇಒ, ಎಐಸಿ ನಿಟ್ಟೆ ಇನ್ಕ್ಯುಬೇಶನ್ ಸೆಂಟರ್.
E -Mail ceo.aic@nitte.edu.in
Mobile : 8660072597
ವಿಜೇತರಿಗೆ ಬಹುಮಾನ :
ಎ) ನಗದು ಬಹುಮಾನಗಳು: ವಾಣಿಜ್ಯೀಕರಣಗೊಳಿಸಬಹುದಾದ ಅಗ್ರ ಐದು ನವೀನ ವ್ಯಾಪಾರ ಕಲ್ಪನೆಗಳು, 25 ಲಕ್ಷದವರೆಗೆ ಬೀಜ ಬಂಡವಾಳವನ್ನು ಪಡೆಯುತ್ತವೆ.
ಬಿ) ಇನ್ಕ್ಯುಬೇಷನ್ ಬೆಂಬಲ: ವಿಜೇತರಿಗೆ ತಮ್ಮ ವ್ಯಾಪಾರ ಕಲ್ಪನೆಗಳನ್ನು ವಾಣಿಜ್ಯೀಕರಣಗೊಳಿಸಲು ಒಂದು ವರ್ಷದ ಅವಧಿಗೆ ಉಚಿತ ಇನ್ಕ್ಯುಬೇಷನ್ ಬೆಂಬಲವನ್ನು ನೀಡಲಾಗುತ್ತದೆ.
ಸಿ) ಮಾರ್ಗದರ್ಶನ ಬೆಂಬಲ: 25 ಅಂತಿಮ ಸ್ಪರ್ಧಿಗಳಿಗೆ ತಜ್ಞರಿಂದ ಮಾರ್ಗದರ್ಶನ, ಕಾರ್ಯತಂತ್ರದ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ .
ಡಿ) ಗುರುತಿಸುವಿಕೆ ಮತ್ತು ಪ್ರಚಾರ: ಐದು ವಿಜೇತರು ಕಾರ್ಪೊರೇಟ್ / ಉದ್ಯಮಕ್ಕೆ ಒಡ್ಡಿಕೊಳ್ಳುವುದರಿಂದ ಮೈಲೇಜ್ ಪಡೆಯುತ್ತಾರೆ ಮತ್ತು ಒಂದು ವರ್ಷದವರೆಗೆ ಈ ಕಾರ್ಯಕ್ರಮದ ಮೂಲಕ ಬೃಹತ್ ಪ್ರಚಾರವನ್ನು ಪಡೆಯುತ್ತಾರೆ

ಉಪಸ್ಥಿತಿ
1. ಡಾ ಎ ಪಿ ಆಚಾರ್, ಸಿಇಒ, ಎಐಸಿ, ನಿಟ್ಟೆ
2. ಶ್ರೀ ವಿನಯ್ ಭಟ್ P.J, ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಂಕ್.
3. ಸಿಎ ಎಸ್ ಎಸ್ ನಾಯಕ್, ಮುಖ್ಯ ಮಾರ್ಗದರ್ಶಕರು, ಎಐಸಿ, ನಿಟ್ಟೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!