ತಾಜಾ ಸುದ್ದಿಗಳುರಾಷ್ಟ್ರೀಯ
5 ಕೋಟಿ ಮೌಲ್ಯದ ನೋಟುಗಳಿಂದ ದೇವಾಲಯದ ಅಲಂಕಾರ

ಆಂಧ್ರಪ್ರದೇಶ: ನವರಾತ್ರಿ ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ನೆಲ್ಲೂರಿನ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನವನ್ನು ನೋಟುಗಳಿಂದ ಅಲಂಕರಿಸಲಾಗಿದೆ.
5 ಕೋಟಿಗೂ ಅಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿದೆ.
100ಕ್ಕೂ ಹೆಚ್ಚು ಸ್ವಯಂಸೇವಕರು ಅಲಂಕಾರಕ್ಕಾಗಿ 2,000, 500, 200, 100, 50 ಮತ್ತು 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೇ ದೇವಿಯನ್ನು ಅಲಂಕರಿಸಲು 7 ಕೆಜಿ ಚಿನ್ನ ಮತ್ತು 60 ಕೆಜಿ ಬೆಳ್ಳಿ ಬಳಸಲಾಗುತ್ತದೆ ಎಂದು ನೆಲ್ಲೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಕ್ಕಳ ದ್ವಾರಕನಾಥ್ ಹೇಳಿದ್ದಾರೆ.