ಕರಾವಳಿತಾಜಾ ಸುದ್ದಿಗಳು
ಶಿರ್ವ: ಅನಿವಾಸಿ ಸಾಫ್ಟ್ ವೇರ್ ಉದ್ಯಮಿ ಮನೆ ಬಾವಿಗೆ ಹಾರಿ ಆತ್ಮಹತ್ಯೆ

ಅನಿವಾಸಿ ಸಾಫ್ಟ್ ವೇರ್ ಉದ್ಯಮಿಯೊಬ್ಬರು ಸೋಮವಾರ ಸಂಜೆ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವದಲ್ಲಿ ನಡೆದಿದೆ.
ಉದ್ಯಮಿಯನ್ನು ಸೈಮನ್ ಡಿಸೋಜ (57) ಎಂದು ಗುರುತಿಸಲಾಗಿದೆ.
ಮೃತ ಸೈಮನ್ ಅವರು ಸುಮಾರು 25 ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಸಾಫ್ಟ್ ವೇರ್ ಉದ್ಯಮಿಯಾಗಿದ್ದು, ಬಳಿಕ ಊರಿಗೆ ಆಗಮಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಸೋಮವಾರ ತಮ್ಮ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಉಡುಪಿ ಅಗ್ನಿಶಾಮಕ ದಳ ಶವವನ್ನು ಬಾವಿಯಿಂದ ಹೊರಗೆ ತೆಗೆದಿದೆ.