ಟಿ 20 ವಿಶ್ವಕಪ್ ತಂಡಕ್ಕೆ ಅಕ್ಸರ್ ಬದಲು ಶಾರ್ದೂಲ್ ಆಯ್ಕೆ,

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ತಂಡದಿಂದ ಕ್ರಿಕೆಟಿಗ ಅಕ್ಸರ್ ಪಟೇಲ್ ಅವರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗಿದ್ದಾರೆ.
ಅ.17 ರಿಂದ ನವೆಂಬರ್ 14 ರವರೆಗೆ ಯುಎಇ ಮತ್ತು ಒಮನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಭಾರತದ ವಿಶ್ವಕಪ್ ಟಿ 20 ತಂಡಕ್ಕೆ ಸೇರಿಸಲಾಗಿದೆ.
ಶಾರ್ದೂಲ್ ಅವರು ಅಕ್ಸರ್ ಪಟೇಲ್ ಅವರ ಸ್ಥಾನ ತುಂಬಿದ್ದಾರೆ. ಅವರನ್ನು ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್ ಕೂಡ ಸೇರಿದ್ದಾರೆ.
ಪಂದ್ಯಾವಳಿಗಾಗಿ ಭಾರತದ ತಂಡವನ್ನು ದೃಢೀಕರಿಸಿದ ಬಿಸಿಸಿಐ, ತಂಡಕ್ಕೆ ಸಹಾಯ ಮಾಡುವ ಎಂಟು ಆಟಗಾರರನ್ನು ಹೆಸರಿಸಿದೆ. ಈ ಆಟಗಾರರೆಂದರೆ ಅವೇಶ್ ಖಾನ್, ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ಲುಕ್ಮನ್ ಮೇರಿವಾಲಾ, ವೆಂಕಟೇಶ್ ಅಯ್ಯರ್, ಕರ್ಣ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ಕೆ. ಗೌತಮ್ ಸೇರಿದ್ದಾರೆ.