ತಾಜಾ ಸುದ್ದಿಗಳುರಾಜ್ಯ
ರಾಜ್ಯದಲ್ಲಿ ಸತತ ಮಳೆ, ತರಕಾರಿ ಬೆಲೆ ಹೆಚ್ಚಳ

ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಕುಂಭ ದ್ರೋಣ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ
ದಿನ ನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುತ್ತಿರುವ ಟೊಮ್ಯಾಟೋ ದರ ಕಿಲೋ 60 ರೂಪಾಯಿ ಗಡಿ ದಾಟಿದೆ. ಈರುಳ್ಳಿ ದರ ಕಿಲೋ 50 ರೂಪಾಯಿ ತಲುಪಿದೆ. ಬೆಂಗಳೂರಿನಲ್ಲಿ ತರಕಾರಿ ದರ ಸ್ವಲ್ಪ ಹೆಚ್ಚಾಗಿದೆ.
ರೈತರು ಬೆಳೆದ ತರಕಾರಿ ಮಾರುಕಟ್ಟೆಗೆ ಸಾಗಿಸಲು ಮಳೆ ಅಡ್ಡಿಯಾಗಿದೆ. ಇದರಿಂದ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಇದು ದರ ಹೆಚ್ಚಳಕ್ಕೆ ಕಾರಣವಾಗಿದೆ.