ಕರಾವಳಿತಾಜಾ ಸುದ್ದಿಗಳು
ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಧನ ಚೆಕ್ ವಿತರಣೆ

ಉಡುಪಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಕೊಡವೂರು ನಿವಾಸಿ ಮೋಕ್ಷಿತ್ ಎಂಬುವವರು ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಶಿಫಾರಸ್ಸು ಮಾಡಿರುವಂತೆ ಪ್ರಾಕೃತಿಕ ಪರಿಹಾರ ನಿಧಿಯಿಂದ ರೂ. 5 ಲಕ್ಷ ಮಂಜೂರಾಗಿರುತ್ತದೆ.
ದಿನಾಂಕ 12-10-2021 ರಂದು ಮೃತರ ಮನೆಗೆ ಭೇಟಿ ನೀಡಿದ ಶಾಸಕ ಕೆ. ರಘುಪತಿ ಭಟ್ ರವರು ಮೃತ ಮೋಕ್ಷಿತ್ ಅವರ ಕುಟುಂಬದವರಿಗೆ ರೂ. 5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ನಾಮ ನಿರ್ದೇಶಿತ ಸದಸ್ಯರಾದ ವಿಜಯ್ ಕುಂದರ್ ಹಾಗೂ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ಕಾರ್ತಿಕೇಯ ಉಪಸ್ಥಿತರಿದ್ದರು.