ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಉಡುಪಿ ಅ.16: ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಇಬ್ಬರು ಮಕ್ಕಳೊಂದಿಗೆ ಹೋದ ತಾಯಿ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಕಾರ್ಕಳದ ಬೋಳ ಪದವಿನಲ್ಲಿ ನಡೆದಿದೆ.
ಬೋಳ ಪದವು ನಿವಾಸಿ ಸವಿತಾ ಪೂಜಾರಿ (36) ಅವರು, ವಿಷ್ಣು (10) ಹಾಗೂ ಆಶ್ಮಿತಾ ಎಂಬ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಇವರು ಗಂಡನನ್ನು ಬಿಟ್ಟು ತಾಯಿ ಮನೆಯಾದ ಬೋಳ ಪದವು ಎಂಬಲ್ಲಿ ವಾಸಿಸುತ್ತಿದ್ದರು.
ಬೀಡಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಇವರು, ಅಕ್ಟೋಬರ್ 12ರಂದು ಸಂಜೆ 4.30ಕ್ಕೆ ಇಬ್ಬರು ಮಕ್ಕಳೊಂದಿಗೆ ಮುಂಡ್ಕೂರಿನ ನಾನಿಲ್ತಾರಿನಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಬಳಿಕ ಅಲ್ಲಿಗೂ ಹೋಗದೆ ಮನೆಗೂ ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ.
ಸವಿತಾ ಪೂಜಾರಿ ಒಂದು ವಾರದ ಹಿಂದೆ ತಮ್ಮನಿಗೆ ಪೋನ್ ಮಾಡಿ ‘ನಾನು ಉಮೇಶ್ ಎಂಬವರನ್ನು ಮದುವೆಯಾಗುತ್ತೇನೆ’ ಎಂದು ಹೇಳಿದ್ದರಂತೆ. ಅದಕ್ಕೆ ತಮ್ಮ ಒಪ್ಪಿರಲಿಲ್ಲ. ಹೀಗಾಗಿ ಉಮೇಶ್ ಎಂಬಾತನೊಂದಿಗೆ ಸವಿತಾ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ