2 ದಿನಗಳ ವಿವಿಧ ರಂಗ ತರಬೇತಿ ಕಾರ್ಯಗಾರ ಸರಣಿ ಉದ್ಘಾಟನೆ

ರಂಗಭೂಮಿ (ರಿ.) ಉಡುಪಿ ನಾಟಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ರಾಜ್ಯದ ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ವಿವಿಧ ರಂಗ ತರಬೇತಿ ಕಾರ್ಯಗಾರ ಸರಣಿ ಇಂದು ದಿನಾಂಕ 16-10-2021 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಉದ್ಘಾಟಿಸಿದರು.
ರಂಗಭೂಮಿ ಕ್ಷೇತ್ರಕ್ಕೆ ಹೊಸ ನೀರು ಹರಿದು ಬರಬೇಕೆಂಬ ಮಹತ್ತರ ಸಂಕಲ್ಪದೊಂದಿಗೆ ಉಡುಪಿಯಲ್ಲಿ ಪ್ರತಿ ತಿಂಗಳ 2ನೇ ಯಾ 3ನೇ ವಾರಂತ್ಯದಲ್ಲಿ ರಾಜ್ಯದ ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ ಈ ರಂಗ ತರಬೇತಿ ಕಾರ್ಯಾಗಾರ ನಡೆಯಲಿದೆ.
ಈ ಸಂದರ್ಭದಲ್ಲಿ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್, ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್, ಸೂರತ್ಕಲ್ ನ ರವೀಂದ್ರ ಪೂಜಾರಿ, ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲರಾದ ದೇವಿದಾಸ್ ಎಸ್. ನಾಯ್ಕ್, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ನಂದಕುಮಾರ್ ಎಂ, ಭಾಸ್ಕರ್ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಚಂದ್ರ ಕುತ್ಪಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.