ಕರಾವಳಿ
ಕುಂದಾಪುರ: ಪಿಕಪ್ ವಾಹನದಲ್ಲಿಅಕ್ರಮ ಗೋ ಸಾಗಾಟ 5 ಜಾನುವಾರುಗಳ ರಕ್ಷಣೆ ಓರ್ವನ ಬಂಧನ.

ಕುಂದಾಪುರ: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ವೇಳೆ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬಂದಿಗಳು ಯಡಮಕ್ಕಿ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ಐದು ಗಂಡು ಕರುಗಳನ್ನು ರಕ್ಷಣೆ ಮಾಡುವುದರೊಂದಿಗೆ ಒರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ನಾಗರಾಜ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಇನ್ನೋರ್ವ ಪರಾರಿಯಾಗಿದ್ದಾನೆ. ಆರೋಪಿ ನಾಗರಾಜನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳು ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಹೊಂದದೇ 5 ಗಂಡು ದನದ ಕರುಗಳನ್ನು ಕಳವು ಮಾಡಿಕೊಂಡು ಅವುಗಳಿಗೆ ಮೇವು, ಬಾಯಾರಿಕೆ ನೀಡದೆ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ತುಂಬಿಸಿ ವಧೆ ಮಾಡಲು ಕುಂದಾಪುರ ತಾಲೂಕಿನ ಶಂಕರನಾರಾಯಣ ಯಡಮಕ್ಕಿ ಕ್ರಾಸ್ ಬಳಿ ಸಾಗಾಟ ಮಾಡುತ್ತಿದ್ದಾಗ ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.