ಕರಾವಳಿ
ಮಣಿಪಾಲ್ ಮ್ಯಾರಥಾನ್ 2022 ನಡೆಸುವ ಬಗ್ಗೆ ಪೂರ್ವಭಾವಿ ಸಭೆ

ಮಣಿಪಾಲ್ ಮ್ಯಾರಥಾನ್ 2022″ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಇಂದು ದಿನಾಂಕ 22-10-2021 ರಂದು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಸಭೆಯಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಫೆಬ್ರವರಿ 13 ರಂದು ಮ್ಯಾರಥಾನ್ ನಡೆಸುವ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾll ಎಚ್. ಎಸ್. ಬಲ್ಲಾಳ್, ಜಿಲ್ಲಾ ಅಮೇಚೂರ್ ಸಂಸ್ಥೆ ಗೌರವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಗೌರವ ಸಲಹೆಗಾರರಾದ ಶ್ರೀ ಅಶೋಕ್ ಅಡ್ಯಂತಾಯ, ಕಾರ್ಯದರ್ಶಿ ಶ್ರೀ ದಿನೇಶ್ ಕುಮಾರ್, ಮಣಿಪಾಲ ವಿಶ್ವವಿದ್ಯಾನಿಲಯದ ಕ್ರೀಡಾ ಕಾರ್ಯದರ್ಶಿ ಡಾll ವಿನೋದ್ ನಾಯಕ್, ಜೊತೆ ಕಾರ್ಯದರ್ಶಿ ಡಾll ಶೋಭಾ, ಅಥಣಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ, ಕೋಶಾಧಿಕಾರಿ ಡಾll ದೀಪಕ್ ರಾಮ್ ಬಾಯಾರಿ, ಎಂ.ಐ.ಟಿ. ದೈಹಿಕ ನಿರ್ದೇಶಕರಾದ ಶ್ರೀಧರ್ ಮತ್ತು ಕರ್ನಲ್ ಪ್ರಕಾಶ್ಚಂದ್ರ ಹಾಗೂ ಲಕ್ಷಂದ್ರ ಇವರು ಉಪಸ್ಥಿತರಿದ್ದರು.