ವಿಶೇಷ ಲೇಖನಗಳು

ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮ ಸಡಿಲಿಕೆ

ಹೊಸದಿಲ್ಲಿ: ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ ಸಡಿಲಿಕೆಯಾಗಲಿದೆ.

ಈ ಮೂಲಕ ವಿದೇಶಿ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ನೇರವಾಗಿ ಮನೆಗೆ ತೆರಳಬಹುದಾಗಿದೆ.

ಹೋಂ ಕ್ವಾರಂಟೈನ್ ನಿಬಂಧನೆಗಳಿಗೂ ಒಳಗಾಗಬೇಕಿಲ್ಲ. ಆದರೆ ಕೋವಿಡ್-19 ಆರ್ ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ.

ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗುವ ನಿಯಮಗಳು..

* ಕೋವಿಡ್ ಲಸಿಕೆಯ ಒಂದು ಡೋಸ್ ಪಡೆದವರು ಅಥವಾ ಲಸಿಕೆಯೇ ಪಡೆಯದ ವಿದೇಶಿ ಪ್ರಯಾಣಿಕರು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಇಂಥವರು ಏಳು ದಿನ ಹೋಂ ಕ್ವಾರಂಟೈನ್ ನಲ್ಲಿದ್ದು, 8ನೇ ದಿನ ಕೋವಿಡ್ ತಪಾಸಣೆ ಮಾಡಿಕೊಳ್ಳಬೇಕು.

* ವಿಮಾನಯಾನ ಕಂಪನಿಗಳ ಸಿಬ್ಬಂದಿ, ಬಂದರು ಹಾಗೂ ಭೂ ಗಡಿಗಳಲ್ಲಿ ವಿದೇಶಗಳೊಂದಿಗೆ ಸಂಪರ್ಕ ಇರಿಸಿಕೊಳ್ಳುವವರಿಗೂ ಈ ನಿಯಮ ಅನ್ವಯವಾಗಲಿದೆ

ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವಾಗಲೇ ಏರ್ ಸುವಿಧಾ ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಆರ್ ಟಿ-ಪಿಸಿಆರ್ ವರದಿಯನ್ನು ಸಲ್ಲಿಸಬೇಕು.ಪ್ರಯಾಣ ಆರಂಭಿಸುವ 72 ಗಂಟೆಗಳ ಮೊದಲು ಈ ಪರೀಕ್ಷೆ ನಡೆದಿರಬೇಕು.

*ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂಬ ಮುಚ್ಚಳಿಕೆಯನ್ನೂ ಪ್ರಯಾಣಿಕರು ಬರೆದುಕೊಡಬೇಕಾಗುತ್ತದೆ.

* ಕೋವಿಡ್ ಸೋಂಕಿತರ ಸಂಖ್ಯೆ ತಗ್ಗಿರುವ ದೇಶದಿಂದ ಬರುವವರು 14 ದಿನಗಳ ಕಾಲ ಆರೋಗ್ಯದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳಬೇಕು.

*ಕೋವಿಡ್ ಲಕ್ಷಣಗಳು ಕಾಣಿಸಿದರೆ ತಕ್ಷಣ ಸ್ವಯಂ ಕ್ವಾರಂಟೈನ್ ಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು.

Related Articles

Leave a Reply

Your email address will not be published. Required fields are marked *

Back to top button
error: Content is protected !!