ಕರಾವಳಿ
ಪರ್ಯಾಯೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಶಾಸಕ ರಘುಪತಿ ಭಟ್ ಆಹ್ವಾನ

ಉಡುಪಿ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾll ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸುವ ಸಲುವಾಗಿ ಪರ್ಯಾಯೋತ್ಸವ ಸಮಿತಿಯೊಂದಿಗೆ ಪರ್ಯಾಯೋತ್ಸವ ಸಮಿತಿ ಗೌರವ ಕಾರ್ಯಧ್ಯಕ್ಷರು, ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಇಂದು ದಿನಾಂಕ 25-10-2021 ರಂದು ಡಾ. ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿ ಗೌರವ ಅಧ್ಯಕ್ಷ ಶ್ರೀ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್, ಬಿ. ವಿ ಲಕ್ಷ್ಮಿ ನಾರಾಯಣ (ಪಿ ಆರ್ ಓ ) ಪ್ರದೀಪ್ ರಾವ್ ಮಟ್ಟು (ಪಿ ಆರ್ ಓ )ಆರ್ಥಿಕ ಸಮಿತಿ ಸಂಚಾಲಕ ಜಯಪ್ರಕಾಶ್ ಕೆದ್ಲಾಯ,ರಾಮಚಂದ್ರ ಉಪಾಧ್ಯ ಕೆ (ಸಂಯೋಜಕರು) ಮುರಳೀಧರ ತಂತ್ರಿ, ಶ್ರೀನಿವಾಸ್ ಬಾಧ್ಯ ಪಿತ್ರೋಡಿ, ರಾಜಗೋಪಾಲ್ ಬಲ್ಲಾಳ್ ಹಾಗೂ ಇತರ ಪದಾಧಿಕಾರಿಗಳು ಉಸ್ಥಿತರಿದ್ದರು.