ಕರಾವಳಿ
ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ನ 91 ನೇ ಸೇವಾಯಜ್ಞ

ಸುರತ್ಕಲ್ : ಇಂದು ಫೌಂಡೇಶನ್ ನ ಪೋಷಕರು ಮತ್ತು ಸೇವಾಧಾರರು ಸುರತ್ಕಲ್ ಕಾಟಿಪಳ್ಳ ದ ಅನಾರೋಗ್ಯದಿಂದ ಬಳಲುತ್ತಿರುವ ಶ್ರೀಮತಿ ವಿಮಲಾ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 20000/ವನ್ನು ಹಾಸ್ತಾಂತರಿಸಿ ಶೀಘ್ರವೆ ಗುಣಮುಖರಾಗಿ ಎಂದು ಹಾರೈಸಿದರು. ಬಳಗದ ಪೋಷಕರು ಶ್ರೀ ಡಾ ಮಧುಕರ್ ದೇವಾಡಿಗರು ಕೆಲವು ವೈದ್ಯಕೀಯ ಸಲಹೆಗಳನ್ನು ನೀಡಿ ಧೈರ್ಯ ತುಂಬಿದರು. ಸೇವಾಧಾರರು ಶ್ರೀ ರಿಕೇಶ್ ಶ್ರೀಯಾನ್ ಮಂಗಳೂರು ಶ್ರೀ ಸಂತೋಷ್ ದೇವಾಡಿಗ ಮಂಗಳೂರು ಮತ್ತು ಶ್ರೀ ಪ್ರಶಾಂತ್ ದೇವಾಡಿಗ ಕಟಪಾಡಿ ಉಪಸ್ಥಿತರಿದ್ದರು. ಈ ಸೇವಾಕಾರ್ಯ ಕ್ಕೆ ತನು ಮನ ಧನ ನೀಡಿ ಸಹಕಾರ ನೀಡಿದ ಸರ್ವ ಪೋಷಕರು ಮತ್ತು ಸೇವಾಧಾರರಿಗೆ ಬಳಗವು ಧನ್ಯವಾದಗಳನ್ನು ಅರ್ಪಿಸುತ್ತದೆ.🙏