ರಾಜ್ಯ

ಅನುಮತಿಯಿಲ್ಲದ ರನ್‌ವೇನಲ್ಲಿ ವಿಮಾನ ಇಳಿಸಿದ ಪೈಲಟ್‌ಗಳಿಬ್ಬರ ವಿರುದ್ಧ ಕ್ರಮ, ತನಿಖೆ ಆರಂಭ

ಬೆಳಗಾವಿ: ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಸೂಚಿಸಿದ ರನ್‌ವೇ ಬದಲು ಬೇರೊಂದು ರನ್‌ವೇನಲ್ಲಿ ವಿಮಾನ ಇಳಿಸಿದ ಇಬ್ಬರು ಪೈಲಟ್‌ಗಳನ್ನು ಏರ್‌ಲೈನ್ ಕಂಪನಿ ಡಿ ರೋಸ್ಟರ್ ಮಾಡಿದೆ.

ಹೈದರಾಬಾದ್‌ನಿಂದ ಬೆಳಗಾವಿಗೆ ಆಗಮಿಸಿದ್ದ ವಿಮಾನದ ಸ್ಪೈಸ್‌ ಜೆಟ್‌ನ ಪೈಲಟ್‌ಗಳು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಗಂಭೀರ ಭದ್ರತಾ ಉಲ್ಲಂಘನೆ ಮಾಡಿದ ಬಗ್ಗೆ ಡಿಜಿಸಿಎ ಮತ್ತು ಏರ್‌ಕ್ರಾಫ್ಟ್ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಟವರ್ ರನ್‌ವೇ ಸಂಖ್ಯೆ 26ರಲ್ಲಿ ಇಳಿಯಲು ಅನುಮೋದಿಸಿದ್ದು, ಪೈಲಟ್‌ಗಳು ವಿಮಾನವನ್ನು ಇನ್ನೊಂದು ತುದಿಯ ರನ್‌ವೇ ಸಂಖ್ಯೆ 8ರಲ್ಲಿ ಇಳಿಸಿ ಪ್ರಮಾದವೆಸಗಿದ್ದರು.
ಈ ಸಮಯದಲ್ಲಿ ರನ್‌ವೇ ಸಂಖ್ಯೆ 8ರಲ್ಲಿ ಯಾವುದೇ ವಿಮಾನ ಇಲ್ಲದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಅ.24 ರಂದು, ಸ್ಪೈಸ್‌ಜೆಟ್ DASH8 Q400 ವಿಮಾನವು ಹೈದರಾಬಾದ್‌ನಿಂದ ಬೆಳಗಾವಿಗೆ ಆಗಮಿಸಿದ್ದ ವಿಮಾನದ ಪೈಲಟ್‌ಗಳು ಈ ಪ್ರಮಾದವೆಸಗಿದ್ದಾರೆ ಎಂದು ಸ್ಪೈಸ್ ಜೆಟ್ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!