
ಪುತ್ತೂರು, ಜೂ.19: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪುತ್ತೂರು ತಾಲೂಕಿನ ಅರಿಯಡ್ಕದ ವಿವಾಹಿತ ಮಹಿಳೆ ಗುರುವಾರ ಮಧ್ಯರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ನಜೀರ್ ಮಾಸ್ಟರ್ ಅವರ ಪತ್ನಿ ನಸೀಮಾ(32) ಮೃತಪಟ್ಟವರು.ಕಳೆದ ಒಂದು ವಾರದಿಂದ ಜ್ವರ ದಿಂದ ಬಳಲುತ್ತಿದ್ದ ನಸೀಮಾ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ವಾಸಿಯಾಗದ ಹಿನ್ನಲೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ.