ಕರಾವಳಿ
ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಕುಣಿತ ಭಜನಾ ಕಾರ್ಯಕ್ರಮ

ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ, ಕೊಡವೂರು ಇದರ ಆಶ್ರಯದಲ್ಲಿ ಇಂದು ದಿನಾಂಕ 27-02-2022 ರಂದು ಶಿವಾಜಿ ಪಾರ್ಕ್ ಲಕ್ಷ್ಮೀನಗರ, ಕೊಡವೂರು ನಲ್ಲಿ ಆಯೋಜಿಸಲಾದ “ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಕುಣಿತ ಭಜನಾ ಕಾರ್ಯಕ್ರಮ”ದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಮೋಹನ್ ಸುವರ್ಣ, ಉಪಾಧ್ಯಕ್ಷರಾದ ಶಶಿಕಲಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಘವೇಂದ್ರ ಕಾಮತ್, ಗೆಳೆಯರ ಬಳಗದ ಅಧ್ಯಕ್ಷರಾದ ರಮೇಶ್ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.