ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಂತ್ಯಸಂಸ್ಕಾರ ನಾಳೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಸಂಜೆ ನಡೆಯಬೇಕಿದ್ದ ಪುನೀತ್ ರಾಜ್ಕುಮಾರ್ ಅವರ ಅಂತ್ಯಸಂಸ್ಕಾರ ನಾಳೆಗೆ ಮುಂದೂಡಲಾಗಿದೆ. ಹೌದು, ಈ ವಿಷಯವನ್ನು ರಾಘವೇಂದ್ರ ರಾಜ್ಕುಮಾರ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಖಚಿತ ಪಡಿಸಿದ್ದಾರೆ.
ಒಂದು ಕಡೆ ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿರುವ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿಗಳು ಪುನೀತ್ ರಾಜ್ಕುಮಾರ್ ಅವರ ಕುಟುಂಬದವರ ಬಳಿ ಮಾತನಾಡಿ, ಅಂತ್ಯಕ್ರಿಯೆಯನ್ನು ಮುಂದೂಡಿದ್ದಾರಂತೆ.
ಮತ್ತೊಂದು ಕಡೆ ಪುನೀತ್ ಅವರ ಮಗಳು ಸಂಜೆ ನಾಲ್ಕರ ಸುಮಾರಿಗೆ ಬೆಂಗಳೂರಿಗೆ ಬರಲಿದ್ದಾರೆ. ಅವರು ಬಂದು ಅಂತ್ಯಕ್ರಿಯೆ ನಡೆಲಿರುವ ಸ್ಥಳ ಸೇರಿಕೊಳ್ಳಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ.
ರಾಜ್ ಕುಟುಂಬದಲ್ಲಿ ಕತ್ತಲಾದ ನಂತರ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದಿರುವ ರಾಘಣ್ಣ, ಧೃತಿ ಬಂದ ನಂತರ ಅಂತ್ಯಕ್ರಿಯೆಯ ಸಮಯದ ಕುರಿತಾಗಿ ಪ್ರಕಟಿಸಲಾಗುವುದು ಎಂದಿದ್ದಾರೆ.
ನಾಳೆ ಬೆಳಗಿನ ಜಾವದ ವರೆಗೂ ಅಪ್ಪುನ ದರ್ಶನ ಮಾಡಲು ಅನುಕೂಲ ಮಾಡಲಾಗುವುದು. ಎಲ್ಲರೂ ನಿಧಾನವಾಗಿ, ಶಾಂತವಾಗಿ ಸಾಲಿನಲ್ಲಿ ಬಂದು ದರ್ಶನ ಮಾಡಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.