ಧೋನಿ ದಿಢೀರ್ ನಿವೃತ್ತಿಗೆ ಇದೇ ಅಸಲಿ ಕಾರಣ..!?

ಮಹೇಂದ್ರ ಸಿಂಗ್ ಧೋನಿ…ವಿಶ್ವ ಕ್ರಿಕೆಟ್ ಕಂಡ ಅದ್ಭುತ ನಾಯಕ.. ವಿಕೆಟ್ ಕೀಪರ್, ಬ್ಯಾಟ್ಸ್ ಮನ್. ಒಳ್ಳೆಯ ಫಿನಿಶರ್. ಬಾಲ್ ಗೆ ರನ್ ಗಳಿಗೆ ಅಜಗಜಾಂತರ ವ್ಯತ್ಯಾಸ ಇದ್ರೂ… ಅತೀ ಕಮ್ಮಿ ಬಾಲ್ ಗಳಲ್ಲಿ ಅತೀ ಹೆಚ್ಚು ರನ್ ಬೇಕಿದ್ದಾಗಲೂ ಧೋನಿ ಕ್ರೀಸ್ ನಲ್ಲಿದ್ದಾರೆ ಎಂದರೆ ಎದುರಾಳಿಗಳು ಗಢಗಢ ನಡುಗುತ್ತಿದ್ದರು .ಧೋನಿ ಅದೆಂಥಾ ಕಠಿಣ ಪಂದ್ಯವನ್ನು ಟರ್ನ್ ಮಾಡುವ ಕೆಪಾಸಿಟಿ ಧೋನಿಗಿತ್ತು.
ಸಡನ್ ಆಗಿ ಡಿವಿಷನ್ ತೆಗೆದುಕೊಳ್ಳುವಲ್ಲಿ ಬಹುಶಃ ಧೋನಿ ಬಿಟ್ರೆ ಇನ್ನೊಬ್ಬ ನಾಯಕ ವಿಶ್ವ ಕ್ರಿಕೆಟ್ ನಲ್ಲಿಲ್ಲ. ಭಾರತ ಕ್ರಿಕೆಟ್ ಪಾಲಿಗೆ ಧೋನಿ ಕೊಡುಗೆ ಪದಗಳಲ್ಲಿ ವರ್ಣಿಸಲಾಗದು.
2007 ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ತರುವ ಉತ್ಸಾಹದಲ್ಲಿ ವೆಸ್ಟ್ ಇಂಡೀಸ್ ಗೆ ಹೋಗಿತ್ತು. ದ್ರಾವಿಡ್ ಸಾರಥ್ಯದ ತಂಡದ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ, ಅದೃಷ್ಟ ಇರಲಿಲ್ಲ. ಮೊದಲ ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬಂತು.
ಆ ಬೇಸರದ ಕಾರ್ಮೋಡದ ನಡುವೆ ಅದೇ ವರ್ಷ ( 2007) ಚೊಚ್ಚಲ ಟಿ20 ವಿಶ್ವಕಪ್ ನಡೆಯಿತು. ಭಾರತ ಯುವಪಡೆ ಸೌತ್ ಆಫ್ರಿಕಾಗೆ ಹೋಯಿತು. ಚೊಚ್ಚಲ ಟಿ20 ವಿಶ್ವಕಪ್ ಆಗಿದ್ರಿಂದ ಭಾರತ ಯುವ ತಂಡದ ಮೇಲೆ ಅಂಥಾ ನಿರೀಕ್ಷೆ ಇರಲಿಲ್ಲ. ಆದರೆ, ಭಾರತ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ, ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು. ಆ ಗೆಲುವು ಏಕದಿನ ವಿಶ್ವಕಪ್ ಸೋಲಿನ ಕಹಿಯನ್ನು ಮರೆಸಿತು. ಅಂದಹಾಗೆ ಟಿ20 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ.
ಧೋನಿ ಭಾರತಕ್ಕೆ 2007 ರ ಟಿ20 ವರ್ಲ್ಡ್ ಕಪ್ ತಂದುಕೊಟ್ಟರು. ಬಳಿಕ ತಮ್ಮ ನಾಯಕತ್ವದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಅನ್ನು ಕೂಡ ಗೆದ್ದರು. ಭಾರತದಲ್ಲಿ ನಡೆದ ಆ ವಿಶ್ವಕಪ್ ನಲ್ಲಿ ಭಾರತ ಗೆದ್ದು ಬೀಗಿತ್ತು.
ಹೀಗೆ ಎರಡೆರಡು ವಿಶ್ವಕಪ್ ತಂದುಕೊಟ್ಟ ಧೋನಿ , ಇಷ್ಟು ಮಾತ್ರವಲ್ಲದೆ ಅನೇಕ ಸರಣಿ ಗೆದ್ದಿದ್ದಾರೆ. ಐಸಿಸಿಯ ಎಲ್ಲಾ ಟೂರ್ನಿಮೆಂಟ್ ಗೆದ್ದ ನಾಯಕ ಧೋನಿ.
2014 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಇಂದು ದಿಢೀರ್ ಅಂತ ಏಕದಿನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೂ ಗುಡ್ ಬೈ ಹೇಳಿದ್ದಾರೆ.
ಧೋನಿ ದಿಢೀರ್ ನಿವೃತ್ತಿಗೆ ಅಸಲಿ ಕಾರಣ?
2019 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವರ್ಲ್ಡ್ ಕಪ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಸೆಮಿಫೈನಲ್ಲಿ ಮುಗ್ಗರಿಸಿತ್ತು. ಆ ಪಂದ್ಯದ ಬಳಿಕ ಧೋನಿ ಒಂದೇ ಒಂದು ಟೂರ್ನಿಯಲ್ಲಿ ಆಡಲಿಲ್ಲ .
IPL ಲ್ಲಿ ಮಿಂಚಿ ಧೋನಿ ಕಮ್ ಬ್ಯಾಕ್ ಆಗುವ ನಿರೀಕ್ಷೆ ಇತ್ತು . ಕೊರೋನಾ ಕಾರಣದಿಂದ ಮಾರ್ಚ್ ನಲ್ಲಿ ನಡೆಯಬೇಕಿದ್ದ IPL ಮುಂದೂಡಲ್ಪಟ್ಟಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ IPL ನಡೆಯಲದೆ. ಕೊರೋನಾ ಕಾರಣದಿಂದ ಟಿ20 ವರ್ಲ್ಡ್ ಕಪ್ ಈ ವರ್ಷ ನಡೆಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಧೋನಿ ಮತ್ತೆ ತಂಡಕ್ಕೆ ವಾಪಸ್ ಆಗುವ ಸಾಧ್ಯತೆ ಇಲ್ಲ. ಅಲ್ಲದೆ ಟಿ20 ವರ್ಲ್ಡ್ ಕಪ್ ಗೆ ಪರಿಗಣನೆ ಕೂಡ ಅನುಮಾನ .ಹಾಗಾಗಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.