ಸ್ಕೂಟರ್‌ನಲ್ಲಿ ಪಟಾಕಿ ಸ್ಫೋಟ: ಸ್ಥಳದಲ್ಲೇ ತಂದೆ, ಮಗ ಸಾವು

ಪುದುಚೆರಿ: ದೀಪಾವಳಿ ಹಬ್ಬದಾಚರಣೆಗೆ ಪಟಾಕಿ ಖರೀದಿಸಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೇಳೆ ಪಟಾಕಿ ಸ್ಫೋಟಿಸಿ ಅಪ್ಪ-ಮಗ ಇಬ್ಬರೂ ಅಸುನೀಗಿದ್ದಾರೆ.
ಪುದುಚೆರಿಯಿಂದ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಗುರುವಾರ ಈ ದುರಂತ ಸಂಭವಿಸಿದೆ. ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ಈ ಘಟನೆ ನಡೆದಿದೆ.
ತಂದೆ ಕಲೈನೇಸನ್ ಮತ್ತು ಅವರ 7 ವರ್ಷದ ಮಗ ಪ್ರದೀಪ್ ಮೃತಪಟ್ಟವರು. ಇಬ್ಬರ ದೇಹವೂ ಛಿದ್ರಛಿದ್ರವಾಗಿದೆ. ಕಲೈನೇಸನ್ ಅವರ ಮನೆಯಲ್ಲಿ ಹಬ್ಬದ ದಿನವೇ ಸೂತಕದ ಛಾಯೆ ಆಚರಿಸಿದೆ.
ಪಟಾಕಿಗಳ ಬಾಕ್ಸ್ ಜತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲೈನೇಸನ್ ಸ್ಕೂಟರ್ ಓಡಿಸುತ್ತಿದ್ದಾಗ ಅವರ ಮಗ ಪ್ರದೀಪ್ ಮುಂಭಾಗದಲ್ಲಿ ಕುಳಿತುಕೊಂಡಿದ್ದ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟರ್ ಸ್ಫೋಟಗೊಂಡಿದೆ.
A man & his son were charred to death after the firecrackers they were carrying on a scooter exploded. The incident occurred near the Puducherry-Villupuram border on Thursday when Diwali was being celebrated across the country.#puducherry #diwali pic.twitter.com/Pq7qZp4JVB
— Arvind Chauhan (@Arv_Ind_Chauhan) November 5, 2021