ರಾಜ್ಯ
ಗೋವಾದ ಅತ್ಯಂತ ಹಿರಿಯ ಮಹಿಳೆ ಲೋಬೋ ಇನ್ನಿಲ್ಲ

ಪಣಜಿ: ಗೋವಾದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಿಕೊಂಡಿದ್ದ ಲಾರ್ಡೆಸ್ ಕಾನ್ಸೆಕಾವೋ ಲೋಬೋ (113) ಇನ್ನಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರು ಎಳೆದಿದ್ದಾರೆ.
103 ವಯಸ್ಸಿನ ತನಕ ಲೋಬೋ ಅವರು ಇನ್ನೊಬ್ಬರ ಸಹಾಯ ಪಡೆಯದೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಆರೋಗ್ಯ ಚೆನ್ನಾಗಿತ್ತು. ಅವರ ಕುಟುಂಬ ಸದಸ್ಯರು ಪ್ರತಿ ವರ್ಷ ಅದ್ದೂರಿಯಾಗಿ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದರು.
103ನೇ ವಯಸ್ಸಿನಲ್ಲಿ ಗ್ಯಾಂಗ್ರೀನ್ ಗೆ ತುತ್ತಾದ ಬಳಿಕ ಅವರ ಕಾಲ್ಬೆರಳನ್ನು ಕತ್ತರಿಸಲಾಗಿತ್ತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಗಾಲಿ ಕುರ್ಚಿಯನ್ನು ಆಶ್ರಯಿಸಬೇಕಾಯಿತು.