ರಾಷ್ಟ್ರೀಯ
ಕ್ರಿಪ್ಟೋ ಟ್ರೇಡಿಂಗ್: 86 ಲಕ್ಷ ರೂ. ವಂಚನೆ, ಬ್ಯಾಂಕ್ ಉದ್ಯೋಗಿಯ ಬಂಧನ.!

ಹೈದರಾಬಾದ್: ಕ್ರಿಪ್ಟೋ ಟ್ರೇಡಿಂಗ್‌ನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ವಂಚಕರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಗುತ್ತಿಗೆದಾರರೊಬ್ಬರಿಗೆ 86 ಲಕ್ಷ ರೂಪಾಯಿಗಳನ್ನು ಕ್ರಿಪ್ಟೋ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡುವ ಸೋಗಿನಲ್ಲಿ ವಂಚಿಸಿದ್ದರು.
ಅತಿ ಕಡಿಮೆ ಅವಧಿಯಲ್ಲಿ 86 ಲಕ್ಷ ರೂಪಾಯಿ ವಂಚಿಸಿದ್ದರು. ಪೊಲೀಸರು ಸಿಲಿಗುರಿಗೆ ತೆರಳಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ಪಶ್ಚಿಮ ಬಂಗಾಳ ಮೂಲದವನಾಗಿದ್ದು ಬ್ಯಾಂಕ್ ಉದ್ಯೋಗಿಯಾಗಿದ್ದ. ಪ್ರಮುಖ ಆರೋಪಿ ದೀಪು ಮೊಂಡಲ್ ಕಣ್ಮರೆಯಾಗಿದ್ದು, ಈತ ವಂಚನೆ ಮಾಡುವ ಉದ್ದೇಶದಿಂದ ಯಾವುದೇ ರೀತಿ ಕಾರ್ಯನಿರ್ವಹಣೆ ಮಾಡದ 14 ಶೆಲ್ ಕಂಪನಿಗಳನ್ನು ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.