ರಾಷ್ಟ್ರೀಯ
ಚಾಲಕ ಮದ್ಯಪಾನ ಮಾಡಿದರೆ ಪೊಲೀಸರು ವಾಹನ ವಶಪಡಿಸಿಕೊಳ್ಳುವಂತಿಲ್ಲ: ಹೈಕೋರ್ಟ್ ತೀರ್ಪು

ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಪತ್ತೆಯಾದರೆ ಪೊಲೀಸರು ವಾಹನ ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.
ಡ್ರಿಂಕ್ಸ್ ಆ್ಯಂಡ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ. ಲಕ್ಷ್ಮಣ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ಚಾಲಕ ಮದ್ಯಪಾನ ಸೇವಿಸಿದ್ದು ಖಚಿತವಾದರೆ ಪೊಲೀಸರು ಆ ವಾಹನದಲ್ಲಿ ಮದ್ಯಪಾನ ಮಾಡದ ವ್ಯಕ್ತಿಗೆ ವಾಹನ ಚಲಾಯಿಸುವಂತೆ ಸೂಚಿಸಬೇಕು. ವಾಹನದಲ್ಲಿ ಒಬ್ಬರೇ ಇದ್ದರೇ ಅವರ ಸಂಬಂಧಿಕರಿಗೆ ಮಾಹಿತಿ ನೀಡಿ ವಾಹನ ನೀಡಬೇಕು. ಸಂಬಂಧಿಕರು ಬರದಿದ್ದರೆ ಮಾತ್ರ ಪೊಲೀಸರು ವಾಹನ ವಶಕ್ಕೆ ಪಡೆದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಇರಿಸಬೇಕು. ಅದನ್ನು ತ್ವರಿತವಾಗಿ ಮಾಲಿಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.