ಜೆಸಿಐ ಭಾರತದ ವಲಯ ಹದಿನೈದರ ” ಸಾಧನಾ ಶ್ರೀ ” ಪ್ರಶಸ್ತಿ ಪುರಸ್ಕಾರ ಜೆಸಿ ಸತೀಶ್ ಆಚಾರ್ಯರಿಗೆ

ಜೆಸಿಐ ಕುಂದಾಪುರ ಸಿಟಿ ಘಟಕದ ಆಥಿತ್ಯದಲ್ಲಿ ನವೆಂಬರ್ 7, 2021ನೇ ಭಾನುವಾರ ಕುಂದಾಪುರದ ಸಹನಾ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಜೆಸಿಐ ವಲಯ ಹದಿನೈದರ ವ್ಯವಹಾರ ಸಮ್ಮೇಳನ ” ಉನ್ನತಿ “2021 ರಲ್ಲಿ
ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ಪ್ರಸ್ತುತ ಡ್ಯಾಷಿಂಗ್ ಕಾರ್ಯದರ್ಶಿ ಹಾಗೂ 2022 ನೇ ಸಾಲಿನ ನೂತನ ಚುನಾಯಿತ ಅಧ್ಯಕ್ಷ, ಉಡುಪಿಯ ಚಿತ್ತರಜನ್ ಸರ್ಕಲ್ ನಲ್ಲಿ ಇರುವ ವಿಲಾಸ್ ಸ್ಟುಡಿಯೋ ಇದರ ಮಾಲಕರೂ ಆಗಿರುವ ಜೆಸಿ ಸತೀಶ್ ಆಚಾರ್ಯ ಇವರ ಸಾಧನೆಯನ್ನು ಗುರುತಿಸಿ ವಲಯದ ಪ್ರತಿಷ್ಠಿತ ವ್ಯವಹಾರ ಕ್ಷೇತ್ರದ ವಿಶೇಷ ಸಾಧಕರಿಗೆ ನೀಡುವ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಕಾರ್ಯಕ್ರಮದಲ್ಲಿ ವಲಯದ ಪ್ರಪ್ರಥಮ ಮಹಿಳಾ ವಲಯಾಧ್ಯಕ್ಷೆ ಜೆಸಿಐ ಪಿ ಪಿ ಪಿ ಸೌಜನ್ಯ ಹೆಗ್ಡೆ , ಜೆಸಿಐ ಭಾರತದ ನಿರ್ದೇಶಕರು ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಹಾಗೂ ನಿಕಟ ಪೂರ್ವ ವಲಯಾಧ್ಯಕ್ಷ ಜೆಸಿಐ ಪಿ ಪಿ ಪಿ ಕಾರ್ತಿಕೇಯ ಮಧ್ಯಸ್ಥ, ವಲಯದ ಹಿರಿಯರು ಮತ್ತು ಪೂರ್ವ ಅಧ್ಯಕ್ಷರು, ವ್ಯವಹಾರ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಭಾಧ್ಯಕ್ಷ ಜೆಸಿ ಸಮದ್ ಖಾನ್, ಆತಿಥೆಯ ಘಟಕದ ಅಧ್ಯಕ್ಷ ಜೆಸಿ ವಿಜಯ ಭಂಡಾರಿ, ಸ್ಥಾಪಕ ಅಧ್ಯಕ್ಷ ಜೆಸಿ ಹುಸೈನ್ ಹೈಕಾಡಿ ಹಾಗೂ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಯ ಡ್ಯಾಷಿಂಗ್ ಅಧ್ಯಕ್ಷ ಜೆ ಎಫ್ ಎಂ ಕೇಶವ ಆಚಾರ್ಯ, ಘಟಕದ ಸ್ಥಾಪಕರು ಮತ್ತು ವಲಯಾಧಿಕಾರಿ ಜೆ ಎಫ್ ಡಿ ಎಂ ಎನ್ ನಾಯಕ್, ಹಾಗೂ ಘಟಕದ ಪ್ರಥಮ ಮಹಿಳೆ ಜೆಸಿ ಜಯಶ್ರೀ ಕೇಶವ ಆಚಾರ್ಯ ಮತ್ತು ಮಾತೃ ಘಟಕದ ಉಪಾಧ್ಯಕ್ಷೆ ಜೆಸಿ ವೀಣಾ ನಾಗೇಶ್, ಹಾಗೂ ಘಟಕದ ಜೆಸಿ ಮತ್ತು ಜೆಸಿಯೇತರ ವಿಶೇಷ ಆವ್ಹಾನಿತರು ಉಪಸ್ಥಿತರಿದ್ದರು.