ಅಂತಾರಾಷ್ಟ್ರೀಯ
45 ವರ್ಷಗಳಷ್ಟು ಹಳೆಯ ಆ್ಯಪಲ್ ಕಂಪ್ಯೂಟರ್ 3.7ಕೋಟಿ ರೂ.ಗೆ ಹರಾಜು ..!

ಕ್ಯಾಲಿಫೋರ್ನಿಯಾ: ಆ್ಯಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ವಜ್ನಿಯಾಕ್ ತಯಾರಿಸಿದ ಆ್ಯಪಲ್ -1 ಕಂಪ್ಯೂಟರ್ ಬರೋಬ್ಬರಿ 5 ಲಕ್ಷ ಡಾಲರ್ ( ಸುಮಾರು 3.7ಕೋಟಿ ರೂ.)ಗೆ ಹರಾಜಾಗಿದೆ.
45ವರ್ಷಗಳಷ್ಟು ಹಳೆಯದಾದ ಈ ಕಂಪ್ಯೂಟರ್ ಕ್ಯಾಲಿಫೋರ್ನಿಯಾ ದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 5ಲಕ್ಷ ಡಾಲರ್ ಗೆ ಹರಾಜಾಗಿದೆ ಎಂದು ವರದಿಯಾಗಿದೆ.
ಕೋವಾ ಮರದಿಂದ ಕಂಪ್ಯೂಟರ್ ಹೊರಭಾಗದ ರಚಿಸಲಾಗಿದ್ದು, ಕಂಪ್ಯೂಟರ್ , ಎನ್ ಟಿ ಐ ಮದರ್ ಬೋರ್ಡ್, ಹಲವು ಕೇಬಲ್ ಗಳು, ಪ್ರೋಗ್ರಾಮಿಂಗ್ ಮಾನ್ಯುವಲ್ ಗಳು, ಪ್ಯಾನಸೋನಿಕ್ ಮಾನಿಟರ್ ಹಾಗೂ ವಿಷಯ ಸೂಚಕ ಕಾರ್ಡ್ ಗಳನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.