ರಾಜ್ಯ
ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸಿದ ಹಂಸಲೇಖ

ಬೆಂಗಳೂರು: ಪೇಜಾವರ ಶ್ರೀಗಳ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದ ಖ್ಯಾತ ಸಂಗೀತಗಾರ ಹಂಸಲೇಖ ಇದೀಗ ಕ್ಷಮೆಯಾಚಿಸಿದ್ದಾರೆ. ಇದೀಗ ಫೇಸ್ ಬುಕ್ ಮೂಲಕ ಹಂಸಲೇಖ ಕ್ಷಮೆಯಾಚಿಸಿದ್ದಾರೆ.
ಯಾರನ್ನು ನೋಯಿಸುವ ಉದ್ದೇಶ ನನಗಿಲ್ಲ. ಪೇಜಾವರ ಶ್ರೀಗಳ ಬಗ್ಗೆ ನನಗೆ ಅತೀವ ಗೌರವ ಇದೆ ಎಂದು ಹಂಸಲೇಖ ಹೇಳಿದ್ದಾರೆ.
ಪೇಜಾವರ ಶ್ರೀಗಳು ದಲಿತರ ಮನೆಗಳಿಗೆ ಭೇಟಿ ಕೊಡುವುದರ ಬಗ್ಗೆ ಹಂಸಲೇಖ ಪ್ರಸ್ತಾಪ ಮಾಡಿದ್ದರು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು.
ದಲಿತರ ಮನೆಗೆ ಪೇಜಾವರ ಶ್ರೀಗಳು ಭೇಟಿ ಕೊಡಬಹುದು. ಆದರೆ ಅವರು ಕೊಟ್ಟ ಆತಿಥ್ಯ ಸ್ವೀಕರಿಸಲು ಸಾಧ್ಯ ಇದೆಯೇ, ಕೋಳಿ ಕುರಿ ತಿಂಡಿ ತಿನ್ನಲು ಸಾಧ್ಯ ಇದೆಯೇ ಎಂಬ ಪ್ರಶ್ನೆ ಮಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು