ಕರಾವಳಿ
ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಯುವಕನೋರ್ವ ಸಾವು.

ಬೈಂದೂರು: ಬೈಂದೂರು ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಚೆಕ್ ಪೋಸ್ಟ್ ಬಳಿ ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಗುಜ್ಜಾಡಿ ಗ್ರಾಮದ ನಿವಾಸಿ ಸುಜಯ ಮೃತ ಯುವಕ ಎಂದು ಗುರುತಿಸಲಾಗಿದೆ.
ಸಂಗಮೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಕಟ್ಟೆ ಪೂಜೆಯ ಸಿದ್ದತೆ ಮಾಡುತ್ತಾ ಮಾವಿನ ತೋರಣ ಕಟ್ಟಲು ಕಟ್ಟೆಯ ಬಳಿ ಇರುವ ಮಾವಿನ ಮರದ ಕೊಂಬೆಯನ್ನು ಕಡಿಯುವಾಗ ಮರದ ಕೊಂಬೆಯ ಸಮೀಪದಲ್ಲಿ ಹಾದು ಹೋದ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು ಇದರಿಂದ ವಿದ್ಯುತ್ ಪ್ರವಹಿಸಿ ಸುಜಯ್ ಅವರಿಗೆ ತಗಲಿದೆ.
ಕೂಡಲೇ ಸ್ಥಳೀಯರು ಅಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅದಾಗಲೇ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ