ಆಲ್ ಇಂಡಿಯಾ ಲೈನೆಸ್ ಕ್ಲಬ್’ನ ‘ಉಡುಪಿ ವಿಹಾರಿ’ ಉದ್ಘಾಟನೆ

ಉಡುಪಿ : ಆಲ್ ಇಂಡಿಯಾ ಲೈನೆಸ್ ಕ್ಲಬ್ ನ ಜಿಲ್ಲಾ ಕೆ.ಎ-2 ಉಡುಪಿ ವಿಹಾರಿ ಇದರ ಉದ್ಘಾಟನಾ ಸಮಾರಂಭ ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಲ್ ಇಂಡಿಯಾ ಲೈನೆಸ್ ಅಧ್ಯಕ್ಷ ಲ.ಡಾ.ಮಂಜಿರ್ ಕುಲಕರ್ಣಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ಎಐಎಲ್ ಸಿಯ ಪಾಟ್ರೋನ್ ಲ.ಇಂದು ಮೆಹತಾ ಅವರು ಭಾಗವಹಿಸಿದ್ದರು.
ಜಿಲ್ಲಾ ಪೂರ್ವ ಕೋ ಆರ್ಡಿನೇಟರ್ ಹಾಗೂ ಲೈನೆಸ್ ಕ್ಲಬ್ ನ ಜಿಲ್ಲಾ ಕೆ.ಎ-2 ಉಡುಪಿ ವಿಹಾರಿ ಇದರ ಸಂಸ್ಥಾಪಕ ಅಧ್ಯಕ್ಷೆ ಲ. ನಿರುಪಮಾ ಪ್ರಸಾದ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಲೈನೆಸ್ ಕೆಎ1 ಇದರ ಅಧ್ಯಕ್ಷೆ ಲ. ಆಶಾ ಮೋಹನ್, ಕೆಎ 1 ಇದರ ಸಂಸ್ಥಾಪಕ ಕಾರ್ಯನಿರ್ವಹಕ ಲ.ನಿರಂಜನ್ ಭಂಡಾರಿ, ಲೈನೆಸ್ ಜಿಲ್ಲಾ ಕಾರ್ಯದರ್ಶಿ ಲ. ಚಂದ್ರಿಕಾ ರವಿಶ್, ಲೈನೆಸ್ ಜಿಲ್ಲಾ ಖಜಾಂಚಿ ಲ. ಮಮತಾ ದಿವಾಕರ್ ಶೆಟ್ಟಿ, ಲಯನೆಸ್ ನ ಇತರ ಸದಸ್ಯರಾದ ಲ.ಹರಿಣಿ ದಾಮೋದರ್, ಲ.ರಂಜನಾ ಶ್ರೀಧರ್ ಶೆಟ್ಟಿ, ಲ. ಲಕ್ಷ್ಮಿ ಪ್ರಸನ್ನ, ಲ.ವಿದ್ಯಾ ಪಿ. ಹೆಗ್ಡೆ ಉಪಸ್ಥಿತರಿದ್ದರು