ರಾಷ್ಟ್ರೀಯ
ಭೂಗತ ಪಾತಕಿ ಛೋಟಾ ರಾಜನ್ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು .!

ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್‌ನನ್ನು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಟ್ಟೆ ನೋವಿನ ಸಮಸ್ಯೆಯಿದೆ ಎಂದು ಛೋಟಾ ರಾಜನ್ ಹೇಳಿಕೊಂಡಿದ್ದರಿ0ದ ಅವರನ್ನ ಪೊಲೀಸರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕು ಬಂದಿದ್ದ ಹಿನ್ನೆಲೆಯಲ್ಲಿ ಛೋಟಾ ರಾಜನ್ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 61 ವರ್ಷದ ರಾಜನ್ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂಡೋನೇಷಿಯಾದ ಬಾಲಿಯಿಂದ ರಾಜನ್ ನನ್ನ ಗಡಿಪಾರು ಮಾಡಲಾಗಿತ್ತು. ಇದಾದ ಬಳಿಕ ರಾಜನ್ ನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ.
ಮುಂಬೈನಲ್ಲಿ ರಾಜನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನ ಸಿಬಿಐಗೆ ವರ್ಗಾಯಿಸಲಾಗಿತ್ತು. 2011ರಲ್ಲಿ ನಡೆದ ಪತ್ರಕರ್ತ ಜ್ಯೋತಿರ್ಮಯ್ ದೇ ಅವರ ಕೊಲೆ ಆರೋಪದಲ್ಲಿ ರಾಜನ್ಗೆ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.