ಜೆಸಿಐ ಭಾರತದ ಜೆಸಿ ವಲಯ ಹದಿನೈದರ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಮತ್ತು ಶಾಶ್ವತ ಪ್ರಾಜೆಕ್ಟ್ ಗಳ ಲೋಕಾರ್ಪಣೆ

ಉಡುಪಿ ಯ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ವು ನವೆಂಬರ್ 17 ನೇ ತಾರೀಕು ಸಂಜೆ ಬಹಳ ಅದ್ದೂರಿ ಯಾಗಿ ವಿಜೃಂಭಣೆ ಯಿಂದ ಜನತಾ ವ್ಯಾಯಾಮ ಶಾಲೆ ಯ ವೇದಿಕೆಯಲ್ಲಿ ಜರುಗಿತು.
ಇದೇ ಸಂದರ್ಭದಲ್ಲಿ ಘಟಕದ ಸದಸ್ಯರಿಗೆ ತಮ್ಮ ಸಾಧನೆ ಯನ್ನು ಗುರುತಿಸಿ, ಘಟಕದ ಕಮಲ ಪತ್ರ ಪ್ರಶಸ್ತಿ ಯನ್ನು ಜೆಸಿ ಪ್ರಶಾಂತ್ ಆಚಾರ್ಯ ಹಾಗೂ ಸಾಧನಾ ರತ್ನ ಪ್ರಶಸ್ತಿ ಯನ್ನು ಜೆಸಿ ಡಾಕ್ಟರ್ ಜೆಸಿ ಪ್ರತಿಮಾ ಜಯಪ್ರಕಾಶ್ ಆಚಾರ್ಯ, ಸಾಧನಾಶ್ರೀ ಪ್ರಶಸ್ತಿ ಯನ್ನು ಜೆಸಿ ಉಮೇಶ್ ಆಚಾರ್ಯಇವರುಗಳಿಗೆ ಕೊಡಮಾಡಲಾಯಿತು.
ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ಡ್ಯಾಷಿಂಗ್ ಘಟಕಾಧ್ಯಕ್ಷರು ಜೆ ಎಫ್ ಎಂ ಕೇಶವ ಆಚಾರ್ಯ ಮತ್ತು ಟೀಮ್ 2021 ಇವರು ವಲಯ ಹದಿನೈದರ ವಲಯಾಧ್ಯಕ್ಷರನ್ನು ಪೂರ್ಣ ಕುಂಭ ಸ್ವಾಗತ ದೊಂದಿಗೆ ಬರಮಾಡಿಕೊಂಡು ಸಾರ್ವಜನಿಕ ರಿಗೆ ಅನುಕೂಲವಾಗಲಿರುವ ದೊಡ್ಡಣಗುಡ್ಡೆ ನಂದನ ವನ ಪಾರ್ಕ್ ನಲ್ಲಿ ಕುಳಿತು ದಣಿವಾರಿಸೋಕೊಳ್ಳಲು ನಾಲ್ಕು ಸಿಮೆಂಟ್ ಕಾಂಕ್ರೀಟ್ ಬೆಂಚ್ , ಅಂಬಾಗಿಲು ಜಂಕ್ಷನ್ ನಲ್ಲಿಒಂದು *”ಸ್ವಚ್ಛ ಸುಂದರ ನಗರ ಪ್ಲಾಸ್ಟಿಕ್ ಮುಕ್ತ ನಗರ ನಿರ್ವಹಣೆ ಅದು ನಮ್ಮ ನಿಮ್ಮೆಲ್ಲರ ಹೊಣೆ ” ಪೋದವಿಗೋಡೆಯ ಶ್ರೀ ಕೃಷ್ಣ ನಗರಿ ಉಡುಪಿ ಗೆ ಸುಸ್ವಾಗತ ಎಂಬ ವಾಕ್ಯ ಗಳೊಂದಿಗೆ ಒಂದು ಸುಂದರ ಕಲಾಕೃತಿ ಯಿಂದ ಕೂಡಿದ ಮಾರ್ಗ ಸೂಚಿ ಶಾಶ್ವತ ಸ್ವಾಗತ ಫಲಕ ಮುಂತಾದ ವಿಶೇಷ ಶಾಶ್ವತ ಪ್ರಾಜೆಕ್ಟ್ ಗಳನ್ನು ಜೆಸಿಐ ವಲಯ ಹದಿನೈದರ ನಾಯಕಿ ನೆಚ್ಚಿನ ಪ್ರಪ್ರಥಮ ಮಹಿಳಾ ವಲಯಾಧ್ಯಕ್ಷೆ ಜೆಸಿಐ ಪಿ ಪಿ ಪಿ ಸೌಜನ್ಯ ಹೆಗ್ಡೆ ಮೇಡಂ ಅವರು ಲೋಕಾರ್ಪಣೆ ಮಾಡಿದರು, ಈ ಸಂದರ್ಭದಲ್ಲಿ ಘಟಕದ ಡ್ಯಾಷಿಂಗ್ ಅಧ್ಯಕ್ಷ ಜೆ ಎಫ್ ಎಂ ಕೇಶವ ಆಚಾರ್ಯ, ವಲಯ ಉಪಾಧ್ಯಕ್ಷ
ಜೆ ಎಫ್ ಎಂ ಸತ್ಯನಾರಾಯಣ ಭಟ್, ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಟು ಜೋನ್ ಪ್ರೆಸಿಡೆಂಟ್ ಜೆಸಿ ದೀಪಕ್ ಗಂಗೂಲಿ, ವಲಯಾಧಿಕಾರಿ ಹಾಗೂ ಘಟಕದ ಸ್ಥಾಪಕರು ಆದ ಜೆ ಎಫ್ ಡಿ ಎಂ ಎನ್ ನಾಯಕ್ ಘಟಕದ ಕಾರ್ಯದರ್ಶಿ ಜೆಸಿ ಸತೀಶ್ ಆಚಾರ್ಯ ಜೆಸಿರೇಟ್ ಚೇರ್ ಪರ್ಸನ್ ಜೆಸಿ ಜಯಶ್ರೀ ಕೇಶವ್, ಜೆಜೆಸಿ ಚೇರ್ ಪರ್ಸನ್ ಜೆಜೆಸಿ ಅನ್ವಿತಾ, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಮಾತೃ ಘಟಕದ ಉಪಾಧ್ಯಕ್ಷೆ ಜೆಸಿ ವೀಣಾ ನಾಗೇಶ್ ಹಾಗೂ ಘಟಕದ ಸರ್ವ ಸದಸ್ಯರು, ಸದಸ್ಯರ ಕುಟುಂಬದ ಹಿರಿಯರು ಮತ್ತು ಗುಂಡಿಬೈಲು ವಾರ್ಡಿನ ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ ಹಾಗೂ ದೊಡ್ಡಣಗುಡ್ಡೆ ಮತ್ತು ಅಂಬಾಗಿಲಿನ ಸ್ಥಳೀಯ ಹಿರಿಯ ಹಾಗೂ ಕಿರಿಯ ನಾಗರಿಕರು ಉಪಸ್ಥಿತರಿದ್ದರು,
ಈ ಕಾರ್ಯಕ್ರಮ ಗಳು ಅತೀ ಹೆಚ್ಚು ಜನ ಮನ್ನಣೆ ಪಡೆದಿರುವುದು ಮತ್ತು ಜೆಸಿಐ ನ “ಆಕ್ಷನ್ ಫ್ರೇಮ್ ವರ್ಕ್ ” ಎಂಬ ಒಂದು ಪ್ರಾಜೆಕ್ಟ್ ನ ಸಾಕಾರ ವಾಗಿ ಘಟಕದ ಹಿರಿಮೆ ಯನ್ನು ಹೆಚ್ಚಿಸುವಲ್ಲಿ ಅಭೂತಪೂರ್ವ ಯಶಸ್ವಿ ಕಂಡಿದೆ ಜೆಸಿಐ ದೊಡ್ಡಣಗುಡ್ಡೆ ಘಟಕವು ಜೆಸಿಐ ಭಾರತದ ಜೀರೋ ಹಂಗರ್ ಕಾರ್ಯಕ್ರಮದಲ್ಲಿ ಈ ವರ್ಷದಲ್ಲಿ ಕೋವಿಡ್ ಲಾಕ್ ಡೌನ್ ಸಂಧರ್ಭ ದಲ್ಲಿ ಉಡುಪಿ ನಗರ ಸುತ್ತಮುತ್ತಲಿನ ನಿರಾಶ್ರಿತರಿಗೆ ಮದ್ಯಾಹ್ನದ ಬಿಸಿಯೂಟ ನೀಡಿ ಸತತವಾಗಿ 32 ದಿನಗಳು ಅವಿರತ ಸೇವೆ ಗೈದು ನಾಗರಿಕರ ಪ್ರಶಂಸೆಗೆ ಪಾತ್ರರಾಗುವುದರ ಜೊತೆಗೆ ಮತ್ತಷ್ಟು ಸಮಾಜದ ಮುಖಿ ಜನೋಪಯೋಗಿ ಕಾರ್ಯಕ್ರಮ ಗಳನ್ನು ನಡೆಸುತ್ತಿರುವುದಕ್ಕೆ ಉಡುಪಿ ಯ ಸ್ಥಳೀಯ ನಾಗರೀಕರು ಶುಭಾಶಯಗಳೊಂದಿಗೆ ಕೊಂಡಾಡಿದ್ದಾರೆ ಹಾಗೂ ಘಟಕದ ಖ್ಯಾತಿಯನ್ನು ವಲಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಘಟಕವು ಮಾಡುವಲ್ಲಿ ದೇವರು ಸದಾ ಅನುಗ್ರಹಿಸಲಿ