ಕರಾವಳಿ
ಉಡುಪಿ: ಬೈಕ್ ಕಳವು

ಉಡುಪಿ : ನಗರದ ಕೆ.ಎಂ ಮಾರ್ಗದಲ್ಲಿರುವ ಮೆಡಿಕಲ್ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಗೈದಿರುವ ಘಟನೆ ನಿನ್ನೆ ನಡೆದಿದೆ.
ಈ ಬಗ್ಗೆ ಬೈಕ್ ಕಳೆದುಕೊಂಡ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಸುಂದರ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನಿನ್ನೆ ಸುಂದರ ಆಚಾರ್ಯ ಅವರು ಕೆ.ಎಂ ಮಾರ್ಗದಲ್ಲಿರುವ ಮೆಡಿಕಲ್ ಎದುರಿನ ರಸ್ತೆ ಬದಿಯಲ್ಲಿ ಕೀ ಸಮೇತ ಬೈಕ್ ನಿಲ್ಲಿಸಿ ಮೆಡಿಕಲ್ ಒಳಗೆ ಹೋಗಿದ್ದರು. ಬಳಿಕ ಕೆಲಸ ಮುಗಿಸಿ ವಾಪಾಸು ಬಂದು ನೋಡಿದಾಗ ಬೈಕ್ ಇಟ್ಟ ಜಾಗದಲ್ಲಿ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. ಅದರಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ಕಳವುಗೈದಿದ್ದಾರೆ. ಕಳವಾದ ಬೈಕ್ ನ ಅಂದಾಜು ಮೌಲ್ಯ 80,000 ರೂ. ಆಗಿರಬಹುದು ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.