ರಾಷ್ಟ್ರೀಯ
ಗುಟ್ಕಾ ವ್ಯಾಪಾರಿ ಮನೆ ಮೇಲೆ ದಾಳಿ: 100 ಕೋಟಿ ರೂಪಾಯಿ ಅಕ್ರಮ ಆಸ್ತಿ ವಶ

ಅಹಮ್ಮದಾಬಾದ್: ಗುಜರಾತ್ ಮೂಲದ ಗುಟ್ಕಾ ವ್ಯಾಪಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆ 100 ಕೋಟಿ ರೂಪಾಯಿಗಿಂತ ಹೆಚ್ಚು ಅಕ್ರಮ ಸಂಪತ್ತನ್ನು ಬಯಲಿಗೆಳೆದಿದೆ.
ನವೆಂಬರ್ 16ರಂದು ಗುಟ್ಕಾ ವ್ಯಾಪಾರಿಗೆ ಸೇರಿದ 15 ಕಡೆ ದಾಳಿ ನಡೆಸಲಾಗಿತ್ತು.
ಅಹ್ಮದಾಬಾದ್ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿತ್ತು. ಮನೆಯಲ್ಲಿ 7.5 ಕೋಟಿ ರೂಪಾಯಿ ನಗದು ಮತ್ತು 4 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.
ಇದೀಗ ಗುಟ್ಕಾ ವ್ಯಾಪಾರಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.