ರಾಷ್ಟ್ರೀಯ
ಮದ್ಯಪಾನ ಮಾಡುತ್ತಿದ್ದ ವೇಳೆ 12ನೇ ಮಹಡಿಯಿಂದ ಬಿದ್ದು ಯುವತಿ ಸಾವು

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದಲ್ಲಿ 12ನೇ ಮಹಡಿಯಿಂದ ಬಿದ್ದು ಯುವತಿಯೊಬ್ಬಳು ಸಾವನ್ನಪಿದ್ದಾಳೆ. ಮೂಲತ: ಉಗಾಂಡದ 28 ರ ಹರೆಯದ ಯುವತಿ ಮುಂಬೈನಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.
ಅಂಧೇರಿ ಪಶ್ಚಿಮ ದಲ್ಲಿರುವ ಅಪಾರ್ಟ್ ಮೆಂಟನ್ 12ನೇ ಮಹಡಿಯಲ್ಲಿ ಸಂಜೆ ಮದ್ಯಪಾನ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಅವರ ಜತೆ ವಾಸವಾಗಿದ್ದ ಇತರರು ನಿದ್ರೆ ಮಾಡುತ್ತಿದ್ದ ವೇಳೆ ಯುವತಿ ಏಕಾಂಗಿಯಾಗಿ ಮದ್ಯಪಾನ ಮಾಡುತ್ತಿದ್ದರು ಎಂದು ವರದಿಯಾಗಿದೆ
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ