ರಾಜ್ಯ
ಮಂಜುಗಡ್ಡೆಯಲ್ಲಿ ಸಿಲುಕಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿ ಸಾವು

ಕಾಸರಗೋಡು: ಮಂಜೇಶ್ವರ ನಿವಾಸಿಯೋರ್ವರು ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದು, ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಮಂಜೇಶ್ವರ ಮಜೀರ್ ಪಳ್ಳದ ಸಿನಾನ್ ಎಂದು ಗುರುತಿಸಲಾಗಿದೆ.
ಸಿನಾನ್ ಅವರು ತಿಂಗಳ ಹಿಂದೆ ಪ್ರವಾಸಕ್ಕೆಂದುತೆರಳಿದ್ದರು. ಕತಾರ್ನಲ್ಲಿ ಉದ್ಯೋಗ ದಲ್ಲಿದ್ದ ಸಿನಾನ್ ಆರು ತಿಂಗಳ ಹಿಂದೆ ಊರಿಗೆ ಬಂದಿದ್ದರು.
ಎರಡು ವಾರಗಳ ಹಿಂದೆಯಷ್ಟೇ ಮನೆಯವರು ಸಂಪರ್ಕಿಸಿದಾಗ ಸಿನಾನ್ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎನ್ನಲಾಗಿದೆ. ಇನ್ನು ಸಿನಾನ್ ದೆಹಲಿಗೆ ತೆರಳಿ ಅಲ್ಲಿಂದ ಹಿಮಾಚಲ ಪ್ರದೇಶಕ್ಕೆ ತೆರಳಿರುವುದಾಗಿ ಮಾಹಿತಿ ಲಭಿಸಿದ್ದು ಹಿಮಾಚಲ ಪ್ರದೇಶದ ಪೊಲೀಸರು ಸಿನಾನ್ ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ಸೋಮವಾರ ಬೆಳಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾಹಿತಿ ತಿಳಿದು ಸಂಬಂಧಿಕರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಈ ಕುರಿತು ಮನೆಯವರು ಸಂಶಯ ವ್ಯಕ್ತ ಪಡಿಸಿದ್ದಾರೆ.