ಕರಾವಳಿ
ಕಟ ಮತ್ತು ಕುಮಿಟೆ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ರಿಯಾ ಶೆಟ್ಟಿ

ಉಡುಪಿ: ಚಿಕ್ಕಮಗಳೂರಿನಲ್ಲಿ ನಡೆದ 11 ನೇ ಸ್ಟೇಟ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ ತರಿಕೆರೆ ಓಪನ್ 2023 ರಲ್ಲಿ PKC ತಂಡದ ಪ್ರತಿಭಾವಂತ ವಿದ್ಯಾಥಿನಿ .ಈಕೆ ಹಾವಂಜೆ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಗಣೇಶ್ ಶೆಟ್ಟಿ ಯವರ ಸುಪುತ್ರಿ ರಿಯಾ ಶೆಟ್ಟಿ ಕಟ ಮತ್ತು ಕುಮಿಟೆ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾಳೆ. ಕುಮಾರಿ ರಿಯಾ ಶೆಟ್ಟಿ ಉಡುಪಿ ಒಳಕಾಡು ಶಾಲೆಯ 8ತರಗತಿಯ ವಿದ್ಯಾರ್ಥಿನಿ. ಅಂತರಾಷ್ಟ್ರೀಯ ಕರಾಟೆ ತರಬೇತುದಾರೆ ಪ್ರವೀಣ ಸುವರ್ಣರ ಬಳಿ ಕರಾಟೆ ತರಬೇತು ಪಡೆಯುತ್ತಿದ್ದಾಳೆ.
ಉದಯೋನ್ಮುಖ ಕರಾಟೆ ಪಟುವಾಗಿ ಬೆಳೆಯುತ್ತಿರುವ ಕುಮಾರಿ ರಿಯಾ ಶೆಟ್ಟಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಯೊಂದಿಗೆ ಶ್ರೇಷ್ಟ ಕರಾಟೆ ಪಟುವಾಗಿ ಮಿಂಚುವಂತಾಗಲಿ.