ಅಂತಾರಾಷ್ಟ್ರೀಯ

ಮೂವರು ಸಹಪಾಠಿಗಳನ್ನು ಗುಂಡು ಹಾರಿಸಿ ಕೊಂದ ವಿದ್ಯಾರ್ಥಿ: ಆರು ಮಂದಿಯ ಸ್ಥಿತಿ ಗಂಭೀರ

ವಾಷಿಂಗ್ಟನ್: ಅಮೆರಿಕದ ಶಾಲೆಯೊಂದರಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ವರದಿಯಾದ ಅತ್ಯಂತ ಭಯಾನಕ ಕೃತ್ಯವಾಗಿದೆ.

ಸಹಪಾಠಿಯೊಬ್ಬ ಗುಂಡು ಹಾರಿಸಿ ಮೂವರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ್ದಾನೆ. ಮಿಚಿಗನ್ ನಲ್ಲಿ ಈ ಘಟನೆ ಸಂಭವಿಸಿದೆ.

15ರ ಹರೆಯದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಯಗೊಂಡವರಲ್ಲಿ ಶಿಕ್ಷಕರೊಬ್ಬರು ಕೂಡ ಸೇರಿದ್ದಾರೆ.

ಮಿಚಿಗನ್ ನಲ್ಲಿರುವ ಆಕ್ಸ್ ಫರ್ಡ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಉನ್ನತ ತನಿಖೆಗೆ ಆದೇಶ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!